ಮೊಳಕಾಲ್ಮುರು: ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್, ಕಾಟನಾಯಕನಹಳ್ಳಿ, ಕೆಳಗಳಹಟ್ಟಿ ಗ್ರಾಮಗಳಿಗೆ ಬುಧವಾರ ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಅವರು ಭೇಟಿ ನೀಡಿ, ಬೂದು ನೀರು ನಿರ್ವಹಣೆಗಾಗಿ ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಘನತ್ಯಾಜ್ಯ ಘಟಕಗಳಲ್ಲಿ ಕಸ ನಿರ್ವಹಣೆ, ಸಮುದಾಯ ಶೌಚಾಲಯಗಳ ನಿರ್ವಹಣೆ, ವೈಯಕ್ತಿಕ ಗೃಹ ಶೌಚಾಲಯಗಳ ಪಂಚತಂತ್ರ-2.0 ರಲ್ಲಿ ಇಂಧೀಕರಿಸುವುದು, ಕಾರ್ಯಾದೇಶ, ಪೆÇ್ರೀತ್ಸಾಹಧನ ಪಾವತಿ ಆದೇಶ ಮತ್ತು ಕೆ2 ಎಸ್‍ಎನ್‍ಎ ಸ್ಪರ್ಶ್ ಮಾಡೆಲ್ ಪಾವತಿ ಕುರಿತು ಪ್ರಗತಿ ಪರಿಶೀಲಿಸಿದರು.
ನಂತರ ರಾಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಾಪುರ ಗ್ರಾಮಕ್ಕೆ ಭೇಟಿ ನೀಡಿ, ಸುಡುಗಾಡ ಸಿದ್ದರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ದಾಖಲೆಗಳನ್ನು ಪರಿಶೀಲಿಸಿ ನಡೆಸಿ ವಾರದೊಳಗೆ ವರದಿ ನೀಡಲು ತಾಲ್ಲೂಕು ನೋಡಲ್ ಅಧಿಕಾರಿ (ವಸತಿ) ಅವರಿಗೆ ಸೂಚಿಸಿದರು.
ನಂತರ ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆ ಕೊಲಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಪರಿಶೀಲಿಸಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಘಟಕಾಂಶಗಳ ಪ್ರಗತಿ ಪರಿಶೀಲಿಸಿದರು. ಚಿತ್ರದುರ್ಗ ತಾಲ್ಲೂಕಿನ ಮಾಡನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎನ್.ಆರ್.ಎಲ್.ಎಮ್ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಘಟಕಾಂಶಗಳ ಪ್ರಗತಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ (ಪಂ.ರಾಜ್) ಯಶವಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಮತ್ತು ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಐಇಸಿ ಸಮಾಲೋಕ ಬಿ.ಸಿ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಿರಿಯ ಅಭಿಯಂತರರಾದ ರೇಖಾ, ಮಲ್ಲಿಕಾರ್ಜುನ, ಪ್ರಜ್ವಲ್ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
Kshetra Samachara
08/01/2025 04:57 pm