ಹಿರಿಯೂರು: ತಾಲೂಕಿನ ವಾಣಿವಿಲಾಸ ಜಲಾಶಯ ಭರ್ತಿಯಾಗಲು ಕೇವಲ 0.40 ಮಾತ್ರ ಬಾಕಿ ಇದ್ದು, ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಅಣೆಕಟ್ಟಿನ ತೂಬಿನ ಬಳಿ ತಂತಿಬೇಲಿ ಅಳವಡಿಸಬೇಕು ಎಂಬುದಾಗಿ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಒತ್ತಾಯಿಸಿದ್ದಾರೆ.
ತಾಲೂಕಿನ ವಾಣಿವಿಲಾಸ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ರೈತಸಂಘದ ಪ್ರತಿನಿಧಿಗಳೊಂದಿಗೆ ಅಣೆಕಟ್ಟೆಗೆ ಮಂಗಳವಾರದಂದು ಭೇಟಿ ನೀಡಿ, ಜಲಾಶಯವನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.
ತೂಬಿನ ಸ್ಥಳದಲ್ಲಿ ಕೆಲವರು ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ, ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ, ಇದು ಅತ್ಯಂತ ಅಪಾಯಕಾರಿ ಜಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಾಲುಜಾರಿ ಅಣೆಕಟ್ಟೆಗೆ ಬೀಳುವ ಅಪಾಯವಿದ್ದು ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಭದ್ರತೆ ಕಲ್ಪಿಸಬೇಕು ಎಂಬುದಾಗಿ ಅವರು ಹೇಳಿದರು.
Kshetra Samachara
08/01/2025 07:21 pm