ಚಿತ್ರದುರ್ಗ : ನಗರಸಭೆ ವ್ಯಾಪ್ತಿಯ ಖಾಸಗಿ ಸೈಟ್ ಸ್ವಚ್ಛ ಮಾಡಿಸದ. ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾದ ಅಧಿಕಾರಿಗಳು, ನಗರಸಭೆಯಿಂದ ಸೈಟ್ ಸ್ವಚ್ಛತೆ ಮಾಡಿ ಅಂಥವರಿಗೆ ದಂಡ ವಿಧಿಸುವ ಕ್ರಮ ಕೈಗೊಂಡಿದ್ದು, ಸ್ವಾಗತಾರ್ಹ, ಆದ್ರೆ ನಗರದಲ್ಲಿ ಗುಂಡಿ ಯಾವಾಗ ಮುಚ್ಚುತ್ತೀರಿ ಅಂತಾ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.
ನಗರದಲ್ಲಿ ಖಾಸಗಿ ಸೈಟ್‌ಗಳನ್ನು ಕ್ಲೀನ್ ಮಾಡಿಸದ ಮಾಲೀಕರ ಸೈಟ್ ಗಳನ್ನು ನಗರಸಭೆ ವತಿಯಿಂದ ಸ್ವಚ್ಛತೆ ಮಾಡಿಸುವ ಕೆಲಸ ಮಾಡ್ತಿದೆ. ಈ ಮೂಲಕ ಖಾಸಗಿ ಮಾಲೀಕರ ಜಾಗದಲ್ಲಿ ಬೋರ್ಡ್ ಅಳವಡಿಸಿ, ಅವರಿಂದ ದಂಡ ವಿಧಿಸುವ ದೇಶದಲ್ಲೇ ವಿನೂತನ ಪ್ರಯತ್ನ ನಗರಸಭೆ ಮಾಡ್ತಿದೆ.
ಆದ್ರೆ ಹೀಗೆ ಸೈಟ್ ಕ್ಲೀನ್ ಮಾಡಿದ ತ್ಯಾಜ್ಯವನ್ನು ಅಲ್ಲೇ ಬಿಟ್ಟಿದ್ದಾರೆ. ಇದರಿಂದ ಸೊಳ್ಳೆ ಹಾಗೂ ಇಲಿಗಳ ಹಾವಳಿ ಹೆಚ್ಚಾಗುತ್ತಿದೆ. ಇನ್ನು ನಗರದಾದ್ಯಂತ ರಸ್ತೆಗಳಲ್ಲಿ ತಗ್ಗು ಗುಂಡಿ ಬಿದ್ದಿವೆ. ಮ್ಯಾನ್ ಹೋಲ್ ಗಳು ಕುಸಿದು ತಗ್ಗು ಬಿದ್ದಿವೆ. ಇವುಗಳನ್ನು ಮುಚ್ಚುವ ಕಾರ್ಯ ನಗರಸಭೆ ಮಾಡ್ತಿಲ್ಲ. ಹಾಗಾಗಿ ನಗರಸಭೆ ಅಧಿಕಾರಿಗಳು ಕೇವಲ ಆದಾಯ ಬರುವ ಕಾರ್ಯ ಮಾತ್ರವಲ್ಲದೇ, ಸಾರ್ವಜನಿಕರ ಉಪಯುಕ್ತ ಕಾರ್ಯಗಳಿಗೂ ಮುಂದಾಗಬೇಕು ಅಂತಾ ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
09/01/2025 01:42 pm