ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಮರ್ಲಹಳ್ಳಿ ಗ್ರಾಮದಲ್ಲಿ ಕೋಟೆಗುಡ್ಡ ಮಾರೇಶ್ವರಿ ಜಾತ್ರೆ ಪ್ರಯುಕ್ತ ಅದ್ದೂರಿಯಾಗಿ ನಡೆದ ಸಿಡಿ ಉತ್ಸವ

ಮೊಳಕಾಲ್ಮುರು:ತಾಲೂಕಿನ ಮರ್ಲಹಳ್ಳಿ ಶ್ರೀ ಕೋಟೆಗುಡ್ಡ ಮಾರೇಶ್ವರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಿಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಆನಂತರ ಸಿಡಿಕಂಬವನ್ನು ನಾನಾ ಹೂವುಗಳಿಂದ ಅಲಂಕರಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿದ್ದರು. ಕಳೆದ ಮೂರು ದಿನಗಳಿಂದಲೂ ಜಾತ್ರಾ ಪ್ರಯುಕ್ತ ನಾನಾ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗಿತ್ತು.

ಸಿಡಿ ಕಂಬ ಹತ್ತಿದ ವ್ಯಕ್ತಿಯನ್ನು ಕಾಣಲು ಜನರು ಮುಗಿಬಿದ್ದಿದ್ದರು. ಸಿಡಿಕಂಬಕ್ಕೆ ಬಾಳೆಹಣ್ಣು, ಬೆಲ್ಲದ ಚೂರು ಎಸೆದು ಭಕ್ತಿ ಸಮರ್ಪಿಸಲಾಯಿತು. ಅನೇಕರು ಸಿಡಿಯಾಡುವ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾಗೆ ಹರಿಬಿಡುತ್ತಿದ್ದರು.

ಸಿಡಿಯಾಡುವ ವ್ಯಕ್ತಿಯು ಪ್ರತಿ ಸುತ್ತಿನಲ್ಲೂ ಕೆಳಗೆ ಬಂದು ಮಾರೇಶ್ವರಿ ದೇವಿಗೆ ನಮಸ್ಕರಿಸುತ್ತಾ ಮೂರು ಸುತ್ತುಗಳನ್ನು ಮುಗಿಸುವವರೆಗೂ ಸಿಡಿಯಾಟ ನೋಡುತ್ತಿದ್ದ ಭಕ್ತರು ಭಾವಪರವಶರಾಗಿ ದೇವಿಗೆ ಜೈಕಾರ ಹಾಕುತ್ತಿದ್ದರು.

ಜಾತ್ರೆಗೆ ಜಿಲ್ಲೆಯ ನಾನಾ ತಾಲೂಕಿನ ಭಕ್ತರೂ ಸೇರಿದಂತೆ ಬಳ್ಳಾರಿ, ದಾವಣಗೆರೆ, ತುಮಕೂರು ಜಿಲ್ಲೆಗಳಿಂದಲೂ ಹಾಗೂ ಆಂಧ್ರಾದಿಂದಲೂ ಆಗಮಿಸಿ ಸಿಡಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

09/01/2025 06:27 pm

Cinque Terre

940

Cinque Terre

0

ಸಂಬಂಧಿತ ಸುದ್ದಿ