ಚಿತ್ರದುರ್ಗ : ದಿನದಿಂದ ದಿನಕ್ಕೆ ತೆಂಗಿನಕಾಯಿಗೆ ಬೇಡಿಕೆ ಹೆಚ್ಚುತ್ತಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ದರ ಮತ್ತಷ್ಟು ದುಬಾರಿಯಾಗಲಿದೆ ಎಂದು ವರ್ತಕರು ಹೇಳುತ್ತಾರೆತೆಂಗಿನಕಾಯಿಗಳ ಗಾತ್ರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತಿದೆ.ಸಣ್ಣ ಗಾತ್ರದ ಕಾಯಿ ₹20-₹22ಕ್ಕೆ ಮಾರಾಟವಾಗುತ್ತಿದ್ದರೆ, ಮಧ್ಯಮ ಗಾತ್ರ ₹25, ದೊಡ್ಡ ಗಾತ್ರದ ಕಾಯಿಗೆ ₹30ರ ವರೆಗೂ ಬೆಲೆ ಸಿಗುತ್ತಿದೆ.
ಸಂತೆಗಳಲ್ಲಿ ಕೆ.ಜಿ ಲೆಕ್ಕದಲ್ಲೂ ಖರೀದಿಸುತ್ತಿದ್ದು, ಕೆ.ಜಿ ₹57-₹60ರ ವರೆಗೂ ಏರಿಕೆಯಾಗಿದೆ.ಹಿಂದಿನ ವರ್ಷಗಳಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹10 ಸಾವಿರಕ್ಕಿಂತ ಕಡಿಮೆ ಇತ್ತು. ಬೆಲೆ ಕುಸಿತದಿಂದ ಕಂಗಾಲಾದವರು ತೆಂಗಿನಮರಗಳ ಜಾಗದಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದಾರೆ. ಇಂತಹ ಹಲವು ಕಾರಣಗಳಿಂದ ತೆಂಗು ಉತ್ಪಾದನೆ ಕುಸಿಯುತ್ತಲೇ ಸಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ವ್ಯಾಪಾರಿಗಳು ಹೇಳುತ್ತಾರೆ.
Kshetra Samachara
09/01/2025 03:26 pm