ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ನೆಲದ ಮೇಲೆ ಬಿದ್ದಿರುವ ವಿದ್ಯುತ್ ವೈರ್ ತೆರುವು ಮಾಡುವಂತೆ ಒತ್ತಾಯ

ಚಿತ್ರದುರ್ಗ : ತಾಲ್ಕೂಕಿನ ಅಬ್ಬೇನಹಳ್ಳಿ ಗ್ರಾಮದ ಆಂಜನೇಯ ಬಡಾವಣೆಯ ಕುಡಿಯುವ ನೀರಿನ ಸ್ಥಾವರಕ್ಕೆ ಟಿ.ಸಿ. ಹಾಗೂ ಜಿನಗಿ ಹಳ್ಳದ ಹತ್ತಿರ ಕುಡಿಯುವ ನೀರಿನ ಸ್ಥಾವರಕ್ಕೆ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಬೆಸ್ಕಾಂ ಇಲಾಖೆಗೆ ಗ್ರಾಮ ಪಂಚಾಯಿತಿ ಸದಸ್ಯ

ಟಿ. ಶೇಖರಗೌಡ ಒತ್ತಾಯಿಸಿದ್ದಾರೆ.

ಬೆಸ್ಕಾಂ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ವಿದ್ಯುತ್ ಕಂಬಗಳ ಅಳವಡಿಸಬೇಕು ಗ್ರಾಮದಿಂದ ಕಾರ್ತಿಕೇನಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಮೋಟಾರ್ ಪಂಪ್ ವೈರು ನೆಲದ ಮೇಲೆ ಇದೆ ಪ್ರತಿದಿನ ಈ ರಸ್ತೆಯಲ್ಲಿ ರೈತರು ಚಿಕ್ಕ ಚಿಕ್ಕ ಮಕ್ಕಳು ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ತುಂಬಾ ತೊಂದರೆಯಾಗುತ್ತದೆ ಬೆಸ್ಕಾಂ ಇಲಾಖೆಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ವತಿಯಿಂದ ಅರ್ಜಿಯನ್ನು ನೀಡಿದ್ದೇವೆ ದಯವಿಟ್ಟು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಶೀಘ್ರವೇ ವಿದ್ಯುತ್ ಕಂಬಗಳು ಮತ್ತು ಟಿ. ಸಿ. ಅಳವಡಿಸಬೇಕು ಎಂದು ಒತ್ತಾಯಿಸಿದರು.

Edited By : PublicNext Desk
Kshetra Samachara

Kshetra Samachara

09/01/2025 08:22 am

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ