ಚಿತ್ರದುರ್ಗ- ಸರ್ಕಾರಿ ಸಾರಿಗೆ ಬಸ್ಸುಗಳಿಲ್ಲದೆ ಆಟೋದಲ್ಲೇ ಪ್ರತಿ ನಿತ್ಯ ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಓಡಾಟ ಮಾಡುತ್ತಿರುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಜೀವದ ಹಂಗು ತೊರೆದು ಆಟೋದಲ್ಲಿ ಜೋತು ಬಿದ್ದು ಮಕ್ಕಳು ಕೂಡಾ ಪ್ರಯಾಣ ಮಾಡುತ್ತಿದ್ದಾರೆ.
ಅಪಾಯ ಗೊತ್ತಿದ್ದೂ ಕೂಡಾ ಮೂಖಪ್ರೇಕ್ಷಕರಂತೆ ಪೋಷಕರು, ಗ್ರಾಮಸ್ಥರು ನಿಂತಿದ್ದಾರೆ. ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೈರಾಡ ಕಾಲೋನಿ, ಬೊಮ್ಮಸಂದ್ರ, ರಂಗವ್ವನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಸ್ಥಿತಿ ಇದಾಗಿದೆ.
ಆಟೋ ಒಳಗೆ ಜಾಗ ಇಲ್ಲದೇ ಆಟೋ ಮೇಲೇರಿ ಶಾಲಾ ಮಕ್ಕಳು ಪ್ರಯಾಣ ಮಾಡುತ್ತಿದ್ದಾರೆ. ಓದುವ ಮಕ್ಕಳು ಶಿಕ್ಷಣಕ್ಕಾಗಿ ಜೀವ ಕೈಯಲ್ಲಿ ಹಿಡಿದು ನಿತ್ಯ ಸಂಚಾರ ಮಾಡುತ್ತಿದ್ದಾರೆ. ಆಟೋ ಮಾಲೀಕರು 10 ಸೀಟ್ ತುಂಬೊ ಜಾಗದಲ್ಲಿ 20-30 ಜನ ತುಂಬುತ್ತಿದ್ದು, ಆಟೋ ಟಾಪ್ ಮೇಲೆ, ಕೆಳಗೆ, ಸೈಡಲ್ಲಿ ನಿಂತು ಪ್ರಯಾಣ ಮಾಡ್ತಿದ್ದಾರೆ. ಬಸ್ಸಿನ ವ್ಯವಸ್ಥೆ ಕಲ್ಪಿಸಲು ಕೂಡಾ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಬಳಿ ಸ್ಥಳೀಯರು ಮನವಿ ಮಾಡಿದ್ದಾರೆ.
PublicNext
08/01/2025 03:20 pm