ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗೊಳಿಸಲು ರೈತರ ನಡೆ ಸಿರಿಗೆರೆ ಮಠದ ಕಡೆ ಹೋರಾಟದ ಪೂರ್ವಭಾವಿ ಸಭೆ

ಮೊಳಕಾಲ್ಮುರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒಕ್ಕೂಟ ಮತ್ತು ನಾನಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಲ್ಲಿ ಸಭೆ ಕರೆಯಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರ ಗೊಳಿಸಲು ಹಾಗೂ ಕೈಬಿಟ್ಟ ಕೆರೆಗಳಿಗೆ ನೀರು ತುಂಬಿಸಲು ಜನವರಿ 13 ಸೋಮವಾರದಂದು ಹಮ್ಮಿಕೊಳ್ಳಲಾಗಿರುವ ರೈತರ ನಡೆ ಸಿರಿಗೆರೆ ಮಠದ ಕಡೆ ಹೋರಾಟದ ಕುರಿತಾಗಿ ಪಟ್ಟಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿ,ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರೂ. 5300 ಕೋಟಿ ಅಗತ್ಯ ಹಣ ಬಿಡುಗಡೆ ಮಾಡಿ ಯೋಜನೆಗೆ ವೇಗ ನೀಡಬೇಕು.

ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದೆ ಸರ್ಕಾರಗಳು ಮಲತಾಯಿ ದೋರಣೆ ತೋರುತ್ತಿದ್ದು ತಕ್ಷಣವೇ ಈ ಯೋಜನೆಗೆ ಹಣಕಾಸು ಬಿಡುಗಡೆ ಮಾಡಿ ನಿಗದಿತ ಸಮಯದಲ್ಲಿ ನೀರಾವರಿ ಸೌಲಭ್ಯ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಜನವರಿ 13 ಸೋಮವಾರದಂದು ನೀರಾವರಿ ಭಗೀರಥ ಸಿರಿಗೇರಿ ಮಠದ ಶ್ರೀ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಭೇಟಿ ಮಾಡಿ ರೈತರಿಂದ ಮನವಿ ಸಮರ್ಪಣೆ ಮಾಡಲಾಗುವುದು, ಆದ್ದರಿಂದ ತಾಲೂಕು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಿದ್ದನಕೋಟೆ ಶ್ರೀ ಬಸವಲಿಂಗ ಮಹಾ ಸ್ವಾಮೀಜಿ, ವಿ ಮಾರನಾಯಕ,ರೈತ ಮುಖಂಡರಾದ ಆರ್ ಬಿ ನಿಜಲಿಂಗಪ್ಪ,ಮರ್ಲಹಳ್ಳಿ ರವಿಕುಮಾರ್,ಮಂಜುನಾಥ್, ಕೊಂಡಾಪುರ ಪರಮೇಶಿ,ಭಕ್ತ ಪ್ರಹ್ಲಾದ್,ಸಂಜೀವ್,ಅಬ್ದುಲ್ಲಾ,ಜಿಯಾವುಲ್ಲಾ, ರಫೀ, ಮರ್ಲಹಳ್ಳಿ ಪರಮೇಶ್,ಕಾಂತರಾಜ್,ಭಾನು ಸೇರಿದಂತೆ ಹಲವರಿದ್ದರು.

Edited By : PublicNext Desk
Kshetra Samachara

Kshetra Samachara

08/01/2025 03:46 pm

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ