ಚಳ್ಳಕೆರೆ ಜ.8 : ನಿರ್ಲಕ್ಷ್ಯಕ್ಕೊಳಗಾದ ಶಾಸನಗಳನ್ನು ರಕ್ಷಣೆಗೆ ಜಿಲ್ಲಾಡಳಿತ. ಮುಂದಾಗಿದೆ.ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹೊರವಕಯದಲ್ಲಿರುವ ಶಿಲಾಶಾನಗಳು ಗಿಡಗೆಂಟೆಗಳ ಪೊದೆ ಸೇರಿ ಕಣ್ಮರೆಯಾಗುತ್ತಿರುವ ಬಗ್ಗೆ ಗ್ರಾಮದ ಯುವಕರು ಮಾಧ್ಯಮಗಳ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದರು.
ಶಿಲಾ ಶಾನಗಳ ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಪ್ರಾಚ್ಯವಸ್ತು ಸಂಗ್ರಾಲಯ ಅಧಿಕಾರಿಗೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ರಕ್ಷಣೆ ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಶಿಲಾ ಶಾಸನಗಳ ಸುತ್ತ ಸ್ವಚ್ಚತೆ ಮಾಡಿ ಅವುಗಳ ರಕ್ಷಣೆಗೆ ತಡೆಗೋಡೆ ಕಾಮಗಾರಿ ಪ್ರಾರಂಭಿಸಿ ಹೈಟೆ ಸ್ಪರ್ಶ ನೀಡಲು ಮುಂದಾಗಿದ್ದು .ಕಾಮಗಾರಿ ನಡೆಯುವ ಸ್ಥಳಕ್ಕೆ ಬುಧವಾರ ತಹಶೀಲ್ದಾರ್ ರೇಹಾನ್ ಪಾಷ ಭೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
08/01/2025 07:45 pm