ಮೊಳಕಾಲ್ಮುರು: ವರದಕ್ಷಿಣೆ ಕಿರುಕುಳದಿಂದ ಮಹಿಳೆಯು ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆಯು ಮೊಳಕಾಲ್ಮೂರು ಪಟ್ಟಣದ ಗಿರಿಜಯ್ಯನಹಟ್ಟಿಯಲ್ಲಿ ನಡೆದಿದೆ.
ಮೃತಳನ್ನು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂತಕಲ್ಲು ತಾಲೂಕಿನ ಪಾಮಿಡಿ ಗ್ರಾಮದ ಪ್ರವಲ್ಲಿಕ (25) ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಇನ್ನು ಮನೆಗೆ ಬಂದ ಮೃತಳ ಗಂಡ ಸುದರ್ಶನ್ ರೆಡ್ಡಿ (30) ಹೆಂಡತಿಯ ಶವವನ್ನು ನೋಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದರ್ಶನ್ ರೆಡ್ಡಿಯು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಸುದರ್ಶನ್ ರೆಡ್ಡಿ ಕೂಡ ಆಂಧ್ರಪ್ರದೇಶದವನಾಗಿದ್ದು, ಮೊಳಕಾಲ್ಮುರು ತಾಲೂಕಿನಲ್ಲಿ ವಿಂಡ್‌ನಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ 2023ರಂದು ದುಬಾರಿ ಬೆಲೆಯ ಆಭರಣ ಮತ್ತು ಹಣ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಪದೇ ಪದೇ ವರದಕ್ಷಿಣೆ ತರುವಂತೆ ಸುದರ್ಶನ್ ಕುಟುಂಬಸ್ಥರು ಚಿತ್ರಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತು ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೃತಳ ಗಂಡ ಸುದರ್ಶನ್ ರೆಡ್ಡಿ ಸೇರಿದಂತೆ ಈತನ ಕುಟುಂಬ ಒಟ್ಟು ಆರು ಜನರ ಮೇಲೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರಾಜಣ್ಣ ಮತ್ತು ಸಿಪಿಐ ವಸಂತ ಆಸೋದೆ ತಹಶೀಲ್ದಾರ್ ಜಗದೀಶ್ ಪಿಎಸ್ಐ ಪಾಂಡುರಂಗಪ್ಪ ಕ್ರೈಂ ಪಿಎಸ್ಐ ಈರೇಶ್ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.
PublicNext
08/01/2025 04:11 pm