ಮೊಳಕಾಲ್ಮುರು:ತಾಲೂಕಿನ ವೆಂಕಟಾಪುರ ಗ್ರಾಮದ ಕೋತಿಗುಡ್ಡ ಸಮೀಪದ ಜಮೀನುಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಗ್ರಾಮದ ಭಗೀರಪ್ಪನವರ ಹನುಮಂತ ಹಾಗೂ ಭೀಮಲಿಂಗಪ್ಪ ಎಂಬುವ ಕುರಿಗಾಯಿಗಳು ಕುರಿ ಮೇಕೆ ಮೇಯಿಸುತ್ತಿದ್ದಾಗ ಚಿರತೆಯೊಂದು ಮೇಕೆಯ ಮೇಲೆ ದಾಳಿ ನಡೆಸಿ ಮೇಕೆಯ ದೇಹದ ಅರ್ಧ ಭಾಗ ತಿಂದು ಹೋಗಿದೆ.
ಇತ್ತೀಚಿನ ದಿನಗಳಲ್ಲಿ ಈ ಗುಡ್ಡ ಸುತ್ತಮುತ್ತಲು ಮೇಯಲು ಬರುವ ಬಹಳಷ್ಟು ಕುರಿ ಮೇಕೆಗಳು ಚಿರತೆಗಳ ದಾಳಿಗೆ ಬಲಿಯಾಗುತ್ತಿವೆ.ವಾರದ ಹಿಂದೆ ಗೊಲ್ಲರ ಈರಕರಿಯಣ್ಣ ಎಂಬುವವರ ತೊಗರಿ ತೊಟದಲ್ಲಿಯೂ ಸಹ ಚಿರತೆಯು ಕುರಿಗಳನ್ನು ತಿಂದು ಬಿಟ್ಟು ಹೋಗಿರುವ ಕುರಿಗಳ ಚರ್ಮ ಮೂಳೆಗಳ ಅವಶೇಷಗಳು ಹೊಲಗಳಲ್ಲಿ ಕಾಣಸಿಗುತ್ತವೆ,
ವೆಂಕಟಾಪುರ ಗ್ರಾಮದ ಜಮೀನುಗಳಿಗೆ ಕೋತಿಗುಡ್ಡ ಸಮೀಪ ಇರುವುದರಿಂದ ಚಿರತೆಗಳು ಪದೇ ಪದೇ ಕುರಿ ಮೇಕೆಗಳ ಮೇಲೆ ದಾಳಿ ನಡೆಸುತ್ತಿವೆ, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
Kshetra Samachara
07/01/2025 10:54 am