ಚಳ್ಳಕೆರೆ : ಶಿಕ್ಷಕರೊಬ್ಬರು ಮಾರಿ ಹಬ್ಬಕ್ಕೆ ಊರಿಗೆ ಹೋದ ಸಮಯದಲ್ಲಿ ಮನೆಯ ಬೀಗ ಮುರಿದು ಒಡವೆ ಹಣ ಕಳ್ಳತನ ಮಾಡಿರುವ ಘಟನೆ ನಗರದ ವಿಠಲ್ ನಗರದಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಸೆಟಲ್ ಕೋರ್ಟ್ ಹಿಂಭಾಗದಲ್ಲಿ ಹನುಮಂತಪ್ಪ ಎಂಬ ಶಿಕ್ಷಕ ಟಿ.ಎನ್ ಕೋಟೆ ಕುಟುಂಬ ಸಮೇತ ಊರಿಗೆ ಹೋಗಿದ್ದರು. ಮಂಗಳವಾರ ಮನೆಗೆ ಬಂದು ನೋಡಿದಾಗ ಮನೆ ಕಳವುವಾಗಿರುವ ಬಗ್ಗೆ ತಿಳಿದುಬಂದಿದೆ.
4 ಸಾವಿರ ನಗದು, ಬಂಗಾರದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಮನೆಯವರು ತಿಳಿಸಿದ್ದಾರೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
Kshetra Samachara
07/01/2025 08:18 pm