ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸುಣ್ಣದ ಕುಲುಮೆಯ ಹೊಗೆಯಿಂದ ಸ್ಥಳೀಯರು ಹೈರಾಣು

ಚಿತ್ರದುರ್ಗ: ಚಿತ್ರದುರ್ಗದ ಸುಣ್ಣದ ಕುಲುಮೆಯಿಂದ ದಟ್ಟ ಹೊಗೆ ಆವರಿಸಿದ್ದು, ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಗರಸಭಾ ಸದಸ್ಯೆ ಮನೆ ಮುಂದೆ ಧರಣಿ ಕೂಡಾ ನಡೆಸಿದ್ದಾರೆ.

ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ವಾರ್ಡ್ ನಂ 1 ಜೋಗಿಮಟ್ಟಿ 5ನೇ ಕ್ರಾಸ್ ನಲ್ಲಿರುವ ಸುಣ್ಣದ ಕಲ್ಲು ಸುಡುವ ಕುಲುಮೆ ದಟ್ಟ ಹೊಗೆ ಆವರಿಸಿದ್ದು, ಕುಲುಮೆ ಮಾಲೀಕನಿಗೆ ಆಕ್ರೋಶಗೊಂಡ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಣ್ಣದ ಕುಲುಮೆಯಿಂದ ಹೊರಸೂಸುವ ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಉಸಿರಾಟ ತೊಂದರೆ ಉಂಟಾಗಿದೆ. ರಸ್ತೆಯಲ್ಲಿ ಓಡಾಡಲೂ ಸಾಧ್ಯವಾಗದಷ್ಟು ಹೊಗೆ ಆವರಿಸಿದೆ. ಕಳೆದ 25 ವರ್ಷಗಳಿಂದ ಸ್ಥಳೀಯರಿಗೆ ಇದೇ ಸಮಸ್ಯೆ ಆಗುತ್ತಿದ್ದರು ಕೂಡಾ ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಮೌನವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

07/01/2025 08:49 am

Cinque Terre

23.81 K

Cinque Terre

0

ಸಂಬಂಧಿತ ಸುದ್ದಿ