ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: "ಐನೂರು, ಸಾವಿರಕ್ಕೆ ಮತ ಮಾರಿಕೊಂಡಿದ್ದೀರಿ, ಈಗ ನೋಡಿ ರಕ್ತದೋಕುಳಿ!"- ಹೂಂಕರಿಸಿದ ಗೂಳಿಹಟ್ಟಿ

ಹೊಸದುರ್ಗ: ತಾಲೂಕಿನ ಅಜ್ಜಪ್ಪನಹಟ್ಟಿ ಗ್ರಾಮದಲ್ಲಿ ದೇವಸ್ಥಾನದ ಪೂಜಾರಿಕೆ ವಿಚಾರಕ್ಕಾಗಿ ಯಾದವ ಸಮುದಾಯದಲ್ಲಿಯೇ ಎರಡು ಬಣಗಳ ನಡುವೆ ಗಲಾಟೆ ನಡೆದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 500,1000 ರೂಪಾಯಿ ಗಳಿಗೆ ಮತಗಳನ್ನು ಮಾರಾಟ ಮಾಡಿಕೊಂಡ ಹೊಸದುರ್ಗ ತಾಲೂಕಿನ ಜನರಿಗೆ ಇಂದು ರಕ್ತದ ಓಕುಳಿಯೇ ಬಹುಮಾನವಾಗಿ ಸಿಕ್ಕಿದೆ! ಇಂತಹ ದಾರುಣ ಪರಿಸ್ಥಿತಿಯನ್ನು ಈಗ ಅನುಭವಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಕೂಡ ಹತ್ತು ವರ್ಷಗಳ ಕಾಲ ತಾಲೂಕಿನ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದೇನೆ. ಆ ಸಂದರ್ಭದಲ್ಲಿ ಇದೇ ಅಜ್ಜಪ್ಪನಹಟ್ಟಿಯಲ್ಲಿ ಒಂದೇ ಒಂದು ಸಣ್ಣ ಗಲಾಟೆ ನಡೆಯುವುದಕ್ಕೂ ಆಸ್ಪದ ನೀಡದೆ, ಇಡೀ ತಾಲೂಕಿನಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿ, ಜನರು ನೆಮ್ಮದಿಯ ಜೀವನ ನಡೆಸುವಂತೆ ನೋಡಿಕೊಳ್ತಾ ಇದ್ದೆ ಎಂದು ನೆನಪಿಸಿದರು.

Edited By : Manjunath H D
PublicNext

PublicNext

04/01/2025 10:57 pm

Cinque Terre

48.1 K

Cinque Terre

0