ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜ್ಜೆ ಸಾಲು ವೇದಿಕೆಯಿಂದ ನುಡಿ ನಮನ ಸಲ್ಲಿಕೆ

ಹೊಸದುರ್ಗ : ಪಟ್ಟಣದ ಶ್ರೀ ದುರ್ಗಾಂಭಿಕ ದೇವಿ ಕಲ್ಯಾಣ ಮಂಟಪದಲ್ಲಿ ಹೆಜ್ಜೆಸಾಲು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ತಜ್ಞರಾದ ಡಾ.ಮನಮೋಹನ್ ಸಿಂಗ್ ಅವರಿಗೆ ಸಂವಾದ ಹಾಗೂ ನುಡಿನಮನ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅಗಲಿದ ಚೈತನ್ಯಕ್ಕೆ ಮೌನಾಚರಣೆ ಮೂಲಕ ಶಾಂತಿಯನ್ನು ಸಲ್ಲಿಸಿದ್ದರು.

ಬಳಿಕ ಅಧ್ಯಕ್ಷರಾದ ಗೋ ತಿಪ್ಪೇಶ್ ಮಾತನಾಡಿ, ಈ ದೇಶ ಕಂಡ ಮಹಾನ್ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.ರಾಜಕೀಯ, ಆರ್ಥಿಕ, ಸಾಮಾಜಿಕ. ದೇಶ ವಿದೇಶ. ರಾಜ್ಯ.ಕೇಂದ್ರ ಹೇಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಗೈದಂತಹ ಮಹಾನ್ ವ್ಯಕ್ತಿ ಸಿಂಗ್ ಅವರು ಆಗಿದ್ದು ಅವರನ್ನ ಕಳೆದುಕೊಂಡ ನಮ್ಮ ದೇಶ ಆರ್ಥಿಕತೆಯ ಜ್ಞಾನ ಭಂಡಾರವನ್ನ ಕಳೆದುಕೊಂಡಂತಾಗಿದೆ ಎಂದು ಸ್ಮರಿಸಿದರು.

Edited By : PublicNext Desk
Kshetra Samachara

Kshetra Samachara

06/01/2025 02:27 pm

Cinque Terre

6.16 K

Cinque Terre

0

ಸಂಬಂಧಿತ ಸುದ್ದಿ