ಚಿತ್ರದುರ್ಗ: ನಗರಸಭೆಯಲ್ಲಿ ರಸ್ತೆ ಅಗಲೀಕರಣ ಸಂಬಂಧಿಸಿದಂತೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಎಂಎಲ್ಸಿ ಕೆ.ಎಸ್ ನವೀನ್ ಅವರು ಭಾಗವಹಿಸಿ ಸಲಹೆ ಸೂಚನೆಗಳನ್ನ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಿತ್ರದುರ್ಗದ ರಸ್ತೆ ಅಗಲೀಕರಣಕ್ಕೆ ಮರು ಚಾಲನೆ ನೀಡಲು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಪಣ ತೊಟ್ಟಿದ್ದಾರೆ.
ಈ ಹಿನ್ನೆಲೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಯುಕ್ತರ ಜೊತೆ ಜಂಟಿ ಸಭೆ ನಡೆಸಿ ಆದಷ್ಟೂ ಬೇಗ ಈ ಕಾರ್ಯಕ್ಕೆ ಚಾಲನೆ ನೀಡಲು ಬೇಕಾದ ಅಗತ್ಯ ಕ್ರಮದ ಬಗ್ಗೆ ಸಲಹೆ ಸೂಚನೆಗಳನ್ನ ಪಡೆದಿದ್ದಾರೆ.
ರಸ್ತೆ ಅಗಲೀಕರಣ ಸಂಬಂಧ ಹತ್ತು ದಿನಗಳಲ್ಲಿ ದಾಖಲೆ ಕಲೆ ಹಾಕಲು ಸೂಚನೆ ನೀಡಿದ್ದೇನೆ. ದಾಖಲೆಗಳ ಪ್ರಕಾರ ಎಷ್ಟು ಅಗಲೀಕರಣ ಮಾಡಬೇಕು ಎಂದು ತೀರ್ಮಾನ ಆಗಲಿದೆ ಎಂದು ತಿಳಿಸಿದರು.
Kshetra Samachara
07/01/2025 05:50 pm