ಚಿತ್ರದುರ್ಗ: ಪಬ್ಲಿಕ್ ನೆಕ್ಟ್ ವರದಿಯ ಫಲಶೃತಿಯಿಂದ ಗ್ರಾಮದಲ್ಲಿ ನಾಲ್ಕು ವರ್ಷಗಳಿಂದ ಅರ್ಧಕ್ಕೆ ನಿಂತಿದ್ದ ಅಂಗನವಾಡಿ ಕಾಮಗಾರಿ ಪುನರಾರಂಭವಾಗಿ ಚುರುಕಿನಿಂದ ಕಾರ್ಯ ನಡೆಯುತ್ತಿದೆ.
ಚಿತ್ರದುರ್ಗ ತಾಲೂಕಿನ ಹೊಸಕಲ್ಲಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿದ್ದ ಅಂಗನವಾಡಿ ಕಟ್ಟಡ ತೆರವು ಮಾಡಿ ನಿರ್ಮಿತಿ ಕೇಂದ್ರದಿಂದ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕಳೆದ ಎರಡುವರೆ ವರ್ಷದಿಂದ ಕಾಮಗಾರಿ ಸ್ಥಗಿತವಾಗಿತ್ತು. ಮಕ್ಕಳಿಗೆ ಗ್ರಾಮದ ರಾಮದೇವರ ದೇವಸ್ಥಾನದ ಶೆಡ್‌ನಲ್ಲಿ ಕಲಿಕಾಭ್ಯಾಸ ನಡೆಸಲಾಗುತ್ತಿತ್ತು. ಈ ಕುರಿತು ಪಬ್ಲಿಕ್ ನೆಕ್ಟ್ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗೆ ಚುರುಕು ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಸಂಪೂರ್ಣ ಮಾಡುವ ಭರವಸೆ ನೀಡಿದ್ದು, ಗ್ರಾಮದ ಅಂಗನವಾಡಿ ಸಮಸ್ಯೆಗೆ ಪರಿಹಾರ ನೀಡಿದಕ್ಕೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.
PublicNext
08/01/2025 01:41 pm