ಚಳ್ಳಕೆರೆ : ಅಪ್ರಾಪ್ತೆಯನ್ನು ಮದುವೆಯಾಗಿ ಅವಳಿಗೆ ಎರಡು ಮಕ್ಕಳನ್ನು ಪಡೆಯುವಂತೆ ಮಾಡಿದ ಸೂಜಿಮಲ್ಲೇಶ್ವರನಗರದ ಲತೀಫ್(22) ಎಂಬ ವ್ಯಕ್ತಿಯ ವಿರುದ್ಧ ಬಾಲ್ಯವಿವಾಹ ಹಾಗೂ ಅಪ್ರಾಪ್ತ ಬಾಲಕಿಗೆ ಲೈಗಿಂಕ ಹಿಂಸೆ ನೀಡಿದ ಪ್ರಕಣವೊಂದು ವರದಿಯಾಗಿದೆ.
ಸೂಜಿಮಲ್ಲೇಶ್ವರನಗರದ ನಿವಾಸಿ ಲತೀಫ್ ತಾಲ್ಲೂಕಿನ ತಿಮ್ಮಾಲಪುರದ ಅಪ್ರಾಪ್ತ ಬಾಲಕಿಯನ್ನು ಕಾನೂನು ವಿರುದ್ಧ ಪ್ರೀತಿಸಿ ಮದುವೆಯಾಗಿದ್ದು, ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ರಾಮಕುಂಟೆ ಗ್ರಾಮದಲ್ಲಿ ಆಕೆಯೊಂದಿಗೆ ವಾಸವಿದ್ದು, ಆಕೆಗೆ 2023ರಲ್ಲಿ ಒಂದು ಹೆಣ್ಣು ಮಗು, 2024ರಲ್ಲಿ ಒಂದು ಗಂಡುಮಗು ಜನ್ಮನೀಡಲು ಕಾರಣನಾಗಿರುತ್ತಾನೆ.
ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಲೈಗಿಂಕವಾಗಿ ಆಕೆಯನ್ನು ದುರುಪಯೋಗ ಪಡಿಸಿಕೊಂಡು ಎರಡು ಮಕ್ಕಳನ್ನು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪಿಎಸ್ಐ ಸತೀಶ್ ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
Kshetra Samachara
08/01/2025 02:31 pm