ಹೊಸದುರ್ಗ : ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಬಿ.ಜಿ. ಗೋವಿಂದಪ್ಪ ಗುರುವಾರ ತಾಲ್ಲೋಕಿನ ಬಲ್ಲಾಳಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಬಲ್ಲಾಳಸಮುದ್ರ ಗ್ರಾ.ಪಂ ಅಲಘಟ್ಟ ಲಂಬಾಣಿಹಟ್ಟಿಯ ಕರಿಯಮ್ಮ ದೇವಿ ದೇವಸ್ಥಾನದಿಂದ ಲಾಲಾನಾಯ್ಕ್ ಮನೆಯವರೆಗೆ ಸುಮಾರು 20.ಲಕ್ಷ ರೂ ಸಿ.ಸಿ ರಸ್ತೆಯ ನಿರ್ಮಾಣಕ್ಕೆ ಚಾಲನೆನೀಡಿದ್ದರು.ಬಳಿಕ ಬಲ್ಲಾಳಸಮುದ್ರ ಗ್ರಾ.ಪಂ. ಮಾರುತಿನಗರ ಭೋವಿ ಕಾಲೋನಿಯಲ್ಲಿ 15.ಲಕ್ಷ ರೂ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು.
ಬಲ್ಲಾಳಸಮುದ್ರ ಗ್ರಾ.ಪಂ ಮಾರುತಿನಗರ ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯಡಿ 56.50 laksha ರೂ ಗಳ ಮನೆ ಮನೆಗೆ ನೀರು ಕೊಡುವ ಯೋಜನೆಯ ಕಾಮಗಾರಿಗೆ ಚಾಲನೆಯನ್ನ ನೀಡಿದ್ದಾರು. ಬಲ್ಲಾಳಸಮುದ್ರ ಗ್ರಾ.ಪಂ ಕಲ್ಲೆರ ಎ.ಕೆ ಕಾಲೋನಿಯಲ್ಲಿ ಚರಂಡಿ ಮತ್ತು ಸಿ ಸಿ ರಸ್ತೆ ನಿರ್ಮಾಣದ 15.00 ಲಕ್ಷಗಳ ಕಾಮಗಾರಿಗೆ ಚಾಲನೆ ನೀಡಿದ್ದರೆ.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು,ಸ್ಥಳೀಯ ಮುಖಂಡರುಗಳು, ಕಾರ್ಯಕರ್ತರು ಹಾಜರಿದ್ದರು.
Kshetra Samachara
09/01/2025 02:18 pm