ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಹಾಗೂ ಬರದ ನಾಡು, ಬಯಲನಾಡು ಎಂದು ಪ್ರಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಚಳ್ಳಕೆರೆ ಅತಿ ದೊಡ್ಡ ತಾಲೂಕು, ಅತಿ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯವನ್ನು ಹೊಂದಿರುವಂತಹ ತಾಲ್ಲೂಕು ಇದ್ದಾಗಿದೆ. ಇಲ್ಲಿ ಯಾವುದೇ ನೀರಿನ ಮೂಲಸೌಲಭ್ಯವಿಲ್ಲದೆ ಮಳೆಗಾಲದಲ್ಲಿ ಬರುವ ಮಳೆಯನ್ನು ಆಶ್ರಯಿಸಿ ಬೆಳೆಗಳನ್ನ ಬೆಳೆಯಲಾಗುತ್ತಿದೆ. ಆದರೆ ವೇದಾವತಿ ನದಿ ಅಕ್ಕಪಕ್ಕದ ಜನರಿಗೆ ನದಿ ವರದಾನ ಎನ್ನುವಂತೆ ಮಳೆ ಬಂದಾಗ ಮಾತ್ರ ನದಿ ಹರಿದು ಈ ಭಾಗದ ಜನರಿಗೆ ಅನುಕೂಲವಾಗುತ್ತಿತ್ತು. ಚಳ್ಳಕೆರೆ ಶಾಸಕ ಟಿ ರಘು ಮೂರ್ತಿ ಅವರು ನದಿಯಲ್ಲಿ ಹಲವು ಕಡೆ ಬ್ಯಾರೇಜ್‌ಗಳನ್ನು ನಿರ್ಮಿಸಿ ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಬಿಟ್ಟಿದ್ದರಿಂದ ನದಿಯ ಸುತ್ತಮುತ್ತ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದ್ದು, ಇನ್ನು ಕೆಲವು ರೈತರು ಭತ್ತ ಸಹ ಬೆಳೆಯುತ್ತಿದ್ದಾರೆ.
ಭತ್ತ ಬೆಳೆಯು ಸಹ ಉತ್ತಮ ಇಳುವರಿ ಬರುತ್ತಿದೆ.ತಾಲ್ಲೂಕಿನ ಬೆಂಬೆರಹಳ್ಳಿ ಬಸಮ್ಮ ಎನ್ನು ರೈತ ಮಹಿಳೆ 2 ಎಕರೆ ಪ್ರದೇಶದಲ್ಲಿ 50 ಕ್ವಿಂಟಾಲ್ ಭತ್ತ ಬೆಳೆದಿದ್ದಾರೆ. ಬೆಳೆ ಬೆಳೆಯಲು ವೇದವತಿ ನದಿ ನಮಗೆ ಅನುಕೂಲವಾಗಿದೆ ಎನ್ನುತ್ತಾರೆ ಬಸಮ್ಮ.
PublicNext
04/01/2025 11:24 am