ಚಿತ್ರದುರ್ಗ: ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿ ಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಇದುವರೆಗೂ ಹೂವು ಕಾಯಿ ಕಟ್ಟಿರುವುದಿಲ್ಲ. ರೈತರು 1 ಎಕರೆಗೆ ಸುಮಾರು 35-40 ಸಾವಿರ ಹಣ ಖರ್ಚು ಮಾಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಸಿ ರೈತರ ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ರೈತರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ 2024 ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಉತ್ತಮ ಹಾಗೂ ಗುಣಮಟ್ಟದ ಬೀಜಗಳು ದೊರೆಯುತ್ತವೆ ಎಂದು ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಎಲ್ಲಾ ತರಹದ ಬೀಜಗಳನ್ನು ಖರೀದಿ ಮಾಡಿರುತ್ತಾರೆ.
2024ರಲ್ಲಿ ಅತಿ ಹೆಚ್ಚು ಮಳೆ ಬಂದಿದ್ದು, ಮುಂಗಾರು ಹಾಗೂ ಹಿಂಗಾರಿನಲ್ಲಿ ಈರುಳ್ಳಿಯು ರೈತರ ಜಮೀನನಲ್ಲಿಯೇ ಕೊಳೆತು ಹೋಗಿರುತ್ತದೆ ಹಾಗೂ ಶೇಂಗಾ ಬೆಳೆಗೆ ಮಳೆ ಹೆಚ್ಚಾದ ಪರಿಣಾಮ ಚೆಳ್ಳುಕಾಯಿ ಆಗಿರುತ್ತದೆ. ಇನ್ನೂ ಅನೇಕ ಬೆಳೆಗಳು ಇದೇ ರೀತಿಯಾಗಿ ಹೆಚ್ಚು ಮಳೆ ಬಂದು ತೊಂದರೆಯಾಗಿರುತ್ತದೆ. ಕೂಡಲೇ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆಯನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಸಿದ್ದಾರೆ.
Kshetra Samachara
26/12/2024 01:49 pm