ಚಿತ್ರದುರ್ಗ: ರೈತರಿಗೆ ಕೃಷಿ ಇಲಾಖೆಯಿಂದ ಕಳಪೆ ತೊಗರಿ ಬೀಜ ವಿತರಣೆ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಆಕ್ರೋಶಗೊಂಡ ರೈತರಿಂದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಲಾಗಿದೆ. ತೊಗರಿ ಗಿಡ ಹಿಡಿದು ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ ವ್ಯಕ್ತವಾಗಿದ್ದು 15 ಅಡಿ ಬೆಳೆದ್ರೂ ತೊಗರಿ ಹೂ ಬಿಟ್ಟಿಲ್ಲ. ಕಾಯಿ ಆಗಿಲ್ಲ. ಬೇರೆ ತಳಿ ಬೆಳೆದ ರೈತರ ಬೆಳೆ ಕಟಾವಿಗೆ ಬಂದಿವೆ. ನಮ್ಮ ಜಮೀನಲ್ಲಿ ಹೂ ಬಿಟ್ಟಿಲ್ಲ, ಕಾಯಿ ಆಗಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳನ್ನು ಡಿಸಿ ವಿಚಾರಣೆ ಮಾಡಬೇಕು. ಕೂಡಲೇ ತೊಗರಿ ಬೀಜ ಸಪ್ಲೈ ಮಾಡಿದ ಕಂಪನಿಯವರ ಮೇಲೆ ಕ್ರಮ ಕೈಗೊಳ್ಳಿ. ಕೂಡಲೇ ಜಿಲ್ಲೆಯಾದ್ಯಂತ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸಿ ಅಂತ ಆಗ್ರಹ ಮಾಡಲಾಗಿದೆ.
PublicNext
27/12/2024 02:13 pm