ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕೋಟೆಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಹಿರಿಯ ನಾಗರಿಕರಿಂದ ಸಂಸದ ಕಾರಜೋಳರಿಗೆ ಮನವಿ

ಚಿತ್ರದುರ್ಗ: ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ನಿವಾರಣೆಗಾಗಿ ಕೋಟೆ ವಾಯುವಿಹಾರಿಗಳ ಸಂಘದ ಸದಸ್ಯರು ಸೇರಿದಂತೆ ಚಿತ್ರದುರ್ಗ ನಾಗರೀಕರು ಗುರುವಾರ ಸಂಸದ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಈಗಾಗಲೇ ಹಿಂದೆ ಇದ್ದ ರೀತಿ ಹಿರಿಯ ನಾಗರಿಕರಿಗೆ ಕೋಟೆಯೊಳಗೆ ಬೆಳಗ್ಗೆ 6 ರಿಂದ 8 ಗಂಟೆವರೆಗೆ. ಮತ್ತು ಸಂಜೆ 4 ರಿಂದ  ರವರೆಗೆ ಉಚಿತ ಪ್ರವೇಶಕ್ಕೆ ಅವಕಾಶವನ್ನು ಮುಂದುವರಿಸುವುದರೊಂದಿಗೆ ಕ್ರಮ ಕೈಗೊಳ್ಳುವುದು. ವಾಯುವಿಹಾರಿಯ ಹಿರಿಯ ನಾಗರಿಕರು ಮತ್ತು ಚಿತ್ರದುರ್ಗ ನಗರದ ನಾಗರಿಕರಿಗೆ ಕೋಟೆಯ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಬೇಕು, ಕೋಟೆಯೊಳಗಿರುವ ಬನಶಂಕರಿ ದೇವಸ್ಥಾನ, ಏಕನಾಥೇಶ್ವರಿ ದೇವಸ್ಥಾನ, ಸಂಪಿಗೆ ಸಿದ್ದೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ, ಪೂಜಾ ಕಾರ್ಯಕ್ರಮಗಳಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಕೋಟೆ ಪ್ರವೇಶಕ್ಕೆ ಅನುಕೂಲ ಮಾಡುವುದು, ಕೋಟೆಯ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದು, ಕೋಟೆಗೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದರ ಮೂಲಕ ನಿರ್ದೇಶನ ನೀಡುವುದು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವ ಹಿರಿಯ ನಾಗರಿಕರಿಗೆ ಕೋಟೆಯ ಪ್ರವೇಶವನ್ನು ನಿರಾಕರಿಸಿ ಪ್ರವೇಶ ಶುಲ್ಕ ನಿಗದಿಪಡಿಸಿರುವ ಪ್ರಯುಕ್ತ ವಾಯುವಿಹಾರಿಗಳು ಕೋಟೆಯ ಮುಂಭಾಗದಲ್ಲಿರುವ ಸಿಮೆಂಟ್ ರಸ್ತೆಯಲ್ಲಿ ವಾಕಿಂಗ್ ಮಾಡಬೇಕಾಗಿರುವುದರಿಂದ ಕೆಲವರು ಅಪಘಾತಗಳು ಉಂಟಾಗಿ ತೊಂದರೆ ಆಗಿರುವ ಪ್ರಯುಕ್ತ ತಕ್ಷಣ ಪ್ರವೇಶ ಶುಲ್ಕದಿಂದ ವಿನಾಯತಿ ನೀಡಬೇಕೆಂದು ವಾಯುವಿಹಾರಿಗಳು ಬೇಡಿಕೆಗಳನ್ನು ಸಲ್ಲಿಸಿದರು.

ಮನವಿ ಪತ್ರ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ತಕ್ಷಣವೇ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಸೂಚಿಸಿದರು.

ಈ ಸಂದರ್ಭದಲ್ಲಿ ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್. ಸತ್ಯಣ್ಣ , ಸದಸ್ಯರಾದ ಮಲ್ಲಿಕಾರ್ಜುನಪ್ಪ, ಶಾಂತಪ್ಪ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/12/2024 06:18 pm

Cinque Terre

780

Cinque Terre

0

ಸಂಬಂಧಿತ ಸುದ್ದಿ