ಮೊಳಕಾಲ್ಮುರು: ವೈದ್ಯರೊಬ್ಬರು ನೀಡಿದ ಚಿಕಿತ್ಸೆ ಅಡ್ಡ ಪರಿಣಾಮದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಗುರುವಾರ ಸಂಜೆ 6:50ಕ್ಕೆ ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆರೆಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ನುಂಕನಹಳ್ಳಿ ಗ್ರಾಮದ ಮಾರಣ್ಣ (40) ಎಂಬುವರು ಡಿಸೆಂಬರ್ 23 ರಂದು ಜ್ವರ ಬಂದಿದ್ದ ಕಾರಣ ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿರುವ ಆರ್‌ಎಂಪಿ ವೈದ್ಯ ವೀರೇಶ್ ಅವರಿಂದ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಇಂಜೆಕ್ಷನ್ ನೀಡಿದ ಜಾಗದಲ್ಲಿ ಊತ ಬಂದಿದ್ದು ಕಡಿಮೆಯಾಗದ ಪರಿಣಾಮ ವೀರೇಶ್ ಬಳಿ ಮತ್ತೆ ಹೋದಾಗ ಬಳ್ಳಾರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ತದ ನಂತರ ವಿಮ್ಸ್ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳೆಗೆ ಮಾರಣ್ಣ ಮೃತಪಟ್ಟಿದ್ದಾನೆ.
ಸಾವಿಗೆ ಆರ್ ಎಂ ಪಿ ವೈದ್ಯ ವೀರೇಶ್ ನೀಡಿರುವ ಚಿಕಿತ್ಸೆ ಅಡ್ಡ ಪರಿಣಾಮ ಕಾರಣ ಎಂದು ದೂರಿ ಸಂಬಂಧಿಕರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮಾಡಲಾಗುತ್ತಿದೆ ಎಂದು ಪಿಎಸ್‌ಐ ಜಿ. ಪಾಂಡುರಂಗಪ್ಪ ತಿಳಿಸಿದರು.
PublicNext
26/12/2024 09:00 pm