ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಜ.18-19 ರಂದು ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನ

ಚಿತ್ರದುರ್ಗ: ಚಿತ್ರದುರ್ಗದ ಬೃಹನ್ಮಠದ ಅನುಭವ ಮಂಟಪದಲ್ಲಿ ಜನವರಿ 18 ಮತ್ತು 19 ರಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನವನ್ನು ನಡೆಸಲು ಸಕಲ ಸಿದ್ದತೆಯನ್ನು ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮೇಶೇಖರ್ ತಿಳಿಸಿದರು.

ಚಿತ್ರದುರ್ಗ ನಗರದ ಬೃಹನ್ಮಠದ ಆವರಣದಲ್ಲಿ ಇಂದು ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನದ ಪೂರ್ವಬಾವಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಮಾಡಲಾಗುವುದು, ಈ ಸಮ್ಮೇಳನದಲ್ಲಿ ದಿನಕ್ಕೆ 30 ಸಾವಿರ ಜನತೆ ಬರುವ ನಿರೀಕ್ಷೆಯಿದೆ. ಈಗಾಗಲೇ ಈ ಸಮ್ಮೇಳನದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಗೋಷ್ಟಿಗಳು ನಡೆಯಲಿವೆ ಎಂದರು.

2014ರಲ್ಲಿ ಶರಣ ಸಾಹಿತ್ಯ ಸಮ್ಮೇಳನ ನಡೆದಿತ್ತು ತದ ನಂತರ ವಿವಿಧ ಕಾರಣಗಳಿಂದ ಸಮ್ಮೇಳನ ನಡೆಯದೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಪರಿಷತ್‍ನ್ನು ಜನತೆಗೆ ಇದರ ಬದಲು ಜಿಲ್ಲಾ ತಾಲ್ಲೂಕು ಸಮ್ಮೇಳನ. ದತ್ತಿ ಉಪನ್ಯಾಸಗಳು ನಿರಂತರವಾಗಿ ನಡೆಯುತ್ತಿದ್ದವು. ಪರಿಷತ್ ನಲ್ಲಿ 950ಕ್ಕೂ ಹೆಚ್ಚು ದತ್ತಿಗಳಿವೆ ಇವುಗಳೊಂದಿಗೆ ಪ್ರತಿ ತಾಲ್ಲೂಕು ಹೋಬಳಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗಿದೆ. ಇದರಲ್ಲಿ ಶರಣ ವಿಚಾರ ಧಾರೆಗಳ ಬಗ್ಗೆ ಉಪನ್ಯಾಸಗಳು, ವಿಚಾರ ಸಂಕಿರಣಗಳು ನಡೆಯುತ್ತಿವೆ. ಇದಕ್ಕೆ ಮುಕುಟ ಪ್ರಾಯವಾಗುವ ಹಾಗೇ ಶರಣ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕೆಂದು ನಿರ್ಧಾರ ಮಾಡಿ ಅದನ್ನು ಚಿತ್ರದುರ್ಗದಲ್ಲಿ ಮಾಡಲು ನಿರ್ಧಾರ ಮಾಡಲಾಯಿತೆಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

27/12/2024 05:12 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ