ಚಳ್ಳಕೆರೆ :ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಗ್ರಾಮದಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದ ರೈತನೋರ್ವ, ಜಿಟಿ ಜಿಟಿ ಸುರಿಸುತ್ತಿರುವ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಹೊಸ ಜೋಗಿಹಟ್ಟಿ ಗ್ರಾಮದ ಕಾಟಯ್ಯ ಬಿನ್ ಗೋಂದಯ್ಯ ಎಂಬ ವ್ಯಕ್ತಿ ತನ್ನ ಸರ್ವೇ ನಂಬರ್ 14ರಲ್ಲಿ 9 ಎಕರೆ ಜಮೀನಿನಲ್ಲಿ 3 ಎಕರೆ ಜಮೀನಿಗೆ ಟೊಮ್ಯಾಟೊ ಬೆಳೆದಿದ್ದು, ಉತ್ತಮ ಇಳುವರಿ ಕೂಡಾ ಬಂದಿದೆ. ಆದರೆ ಸೂಕ್ತ ಬೆಳೆ ಸಿಗದೇ ಗಿಡದಲ್ಲೇ ಟೊಮ್ಯಾಟೊ ಬೆಳೆ ಕೊಳೆತು ಹೋಗುತ್ತಿದ್ದು, ನಿಜಕ್ಕೂ ಕೂಡಾ ಲಕ್ಷಾಂತರ ಬಂಡವಾಳ ಹೂಡಿದ್ದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಕಿದ್ದ ಬಂಡವಾಳ ಕೂಡಾ ಸಿಗದೇ ರೈತ ನಷ್ಟಕ್ಕೆ ಸಿಲುಕಿದ್ದು, ಸರ್ಕಾರಕ್ಕೆ ಪರಿಹಾರಕ್ಕಾಗಿ ಡಿ.27 ಸಂಜೆ 4 ಗಂಟೆಗೆ ಆಗ್ರಹಿಸಿದ್ದಾರೆ.
Kshetra Samachara
27/12/2024 08:28 pm