ಚಳ್ಳಕೆರೆ : ನಗರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರು ನಗರದಲ್ಲಿ ನಗರೋತ್ಥನ ಅನುದಾನದಲ್ಲಿ ಸಂಪೂರ್ಣಗೊಂಡ ವಿವಿಧ ಕಾಮಗಾರಿಗಳು ಹಾಗೂ ರಾಜಕಾಲವೆ ಒತ್ತುವರಿಯ ಸ್ಥಳಗಳನ್ನು ವೀಕ್ಷಣೆ ಮಾಡಿದರು.
ಇನ್ನು ಜಿಲ್ಲಾಧಿಕಾರಿಗಳು ಜಿಟಿ ಜಿಟಿ ಮಳೆಯಲ್ಲಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಬಳ್ಳಾರಿ ರಸ್ತೆಯ ಸೂಜಿ ಮಲ್ಲೇಶ್ವರನಗರದ ರಾಜಕಾಲುವೆ ಮಾರ್ಗದ ಸ್ಥಳಕ್ಕೆ ಆಗಮಿಸಿ ಈಗಾಗಲೇ ಇದ್ದ ರಾಜಕಾಲುವೆ ಮಾರ್ಗವನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿ ಅತಿ ಶೀಘ್ರವಾಗಿ ಒತ್ತುವರಿಯಾಗಿರುವುದನ್ನು ತೆರುವುಗೊಳಿಸಬೇಕು ಎಂದು ಸೂಚಿಸಿದರು.
ದಾಖಲಾತಿಗಳ ಪರಿಶೀಲಿಸಿ ರಾಜಕಾಲವಿಯ ಮಾರ್ಗವನ್ನು ತೆರವುಗೊಳಿಸಿ ಕೆರೆಯ ನೀರು ಸರಾಗ ಅರಿಯುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಇನ್ನು ನಗರಸಭೆ ಅಧ್ಯಕ್ಷೆ ಜೈತುಂಬಿ ಮಲ್ಲಿಕ್ ಸಾಬ್ ರವರು ಮಾತನಾಡಿ ಚಳ್ಳಕೆರೆ ನಗರದ ಅಜ್ಜನ ಗುಡಿಕೆರೆಯಿಂದ ಕೊಡಿ ನೀರು ರಹಿಂ ನಗರ, ಸೂಜಿ ಮಲ್ಲೇಶ್ವರ ನಗರದ ಮೂಲಕ ಬಳ್ಳಾರಿ ರಸ್ತೆಯಿಂದ ಕಾಟಪನಹಟ್ಟಿ ಗೊಲ್ಲರಹಟ್ಟಿ ನೂಲಕ ನಗರಂಗೆರೆ ಕೆರೆಗೆ ಸೇರುತ್ತವೆ.
ಆದರೆ ರಾಜಕಾಲುವೆ ಮಾರ್ಗದ ಭೂಮಿ ಒತ್ತುವರಿಯಾಗಿರುವ ಕಾರಣ ನಗರದ ಸೂಜಿಮಲ್ಲೆಶ್ವರ ನಗರದಿಂದ ಕಾಟಪನಹಟ್ಟಿ ಗೊಲ್ಲರಹಟ್ಟಿಯವರೆಗೆ ತುಂಬಾ ತೊಂದರೆಯಾಗುತ್ತದೆ, ಇದರಿಂದ ರಾಜಕಾಲುವೆ ಪಕ್ಕದ ನಿವಾಸಿಗಳು ಮಳೆ ಬಂದ ಸಂಧರ್ಭದಲ್ಲಿ ಜೀವದ ಭಯದಲ್ಲಿ ವಾಸಿಸುವಂತಾಗಿದೆ, ಆದ್ದರಿಂದ ಮೂಲತಃ ಇದ್ದಂತ ರಾಜಕಾರಣಿ ಮಾರ್ಗವನ್ನು ನಕ್ಷೆಯ ಪ್ರಕಾರ ತೆರವುಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
Kshetra Samachara
27/12/2024 06:34 pm