ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಭ್ರಷ್ಟಾಚಾರ ದಂಧೆಯಲ್ಲೇ ಮುಳುಗಿದ ಜಾನಕಲ್ ಗ್ರಾಮ ಪಂಚಾಯತ್ ಪಿಡಿಒ ಶಿವಕುಮಾರ್

ಹೊಸದುರ್ಗ: ಭ್ರಷ್ಟಾಚಾರದ ಬ್ರಹ್ಮಾಂಡವನ್ನೇ ಆಳುವಂತಹ ಅಧಿಕಾರಿಗಳ ಸಾಲಿಗೆ ಸಿರಿಧಾನ್ಯಗಳ ನಾಡಿನ ಪಿಡಿಒ ಕೂಡ ಸೇರಿದ್ದಾರೆ. ಈತನ ಮಾತು ವರಸೆ ವರ್ಚಸ್ಸು ಎಲ್ಲದರಲ್ಲಿಯೂ ಕಮಿಷನ್ ಕಮಿಷನ್ ಕಮಿಷನ್.

ಹೌದು ಹೊಸದುರ್ಗ ತಾಲೂಕಿನ ಜಾಣಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರು ಕಾಮಗಾರಿಗಳ ಸಪ್ಲೈ ಬಿಲ್ ಹಣದಲ್ಲಿ ಲಂಚವನ್ನ ಕಮಿಷನ್ ರೂಪದಲ್ಲಿ ಕೇಳುತ್ತಿದ್ದಾರೆ ಎಂದು ಆರೋಪಿಸಿ ಪಿಡಿಒ ಅವರ ವಿರುದ್ಧ ಕಾನೂನು ಕ್ರಮಕ್ಕೆ ವಿಡಿಯೋ ಮತ್ತು ಆಡಿಯೋ ಸಾಕ್ಷಿಗಳ ಸಮೇತ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಜಾನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯಲ್ಲಾ ಭೋವಿಹಟ್ಟಿ ಗ್ರಾಮದ ದೇವರಾಜ್ ಹಾಗೂ ಇತರರು ದಿನಾಂಕ 26.12.2024 ಗುರುವಾರದೊಂದು ಪಿಡಿಓ ವಿರುದ್ಧ ಈ ದೂರು ನೀಡಿದ್ದು, ಪಿಡಿಓ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪಿಡಿಒ ಶಿವಕುಮಾರ್ ಅವರು ಕಾಮಗಾರಿಗಳ ಸಪ್ಲೈ ಬಿಲ್ನಲ್ಲಿ, ರಾಯಲ್ಟಿ ಮತ್ತು ಜಿಎಸ್‌ಟಿ ಹಣಕ್ಕಿಂತ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಪ್ರತೀ ಕಾಮಗಾರಿಗೆ ಜಿಎಸ್ಟಿ ಮತ್ತು ರಾಯಲ್ಟಿ ( ರಾಜಧನ ) ಹೊರತುಪಡಿಸಿ 10000 ವರೆಗೆ ಕಮಿಷನ್ ಕೇಳ್ತಾ ಇದ್ದಾರೆ. ಈ ಕಮಿಷನ್ ಹಣದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ EO ಅವರಿಗೂ ಇಂತಿಷ್ಟು ಪರ್ಸೆಂಟ್ ಕೊಡಬೇಕು, ಹಾಗಾಗಿ ಅಷ್ಟು ಹಣ ಕೊಡಲೇಬೇಕು ಎಂದು ನೇರವಾಗಿ ಕೇಳುತ್ತಾರೆ.

ಹೀಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ವಿಡಿಯೋ ಮತ್ತು ಆಡಿಯೋ ಸಾಕ್ಷಿಗಳ ಸಮೇತ ದೂರು ನೀಡಿದ್ದು ಈ ಪಿಡಿಓ ಅವರ ಮೇಲೆ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸಬೇಕೆಂದು ಎಲ್ಲಾ ಭೋವಿಹಟ್ಟಿ ಗ್ರಾಮದ ದೇವರಾಜ್ ಮತ್ತು ಇತರರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

28/12/2024 08:03 pm

Cinque Terre

35.95 K

Cinque Terre

0

ಸಂಬಂಧಿತ ಸುದ್ದಿ