ಹಿರಿಯೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಎರಡು ಕಡೆ, ಆಮೆಗತಿಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹಾಗೂ ಕಸ್ತೂರಿ ರಂಗಪ್ಪನ ಹಳ್ಳಿಗಳು ಸರಣಿ ಅಪಘಾತದ ಹಾಟ್‌ಸ್ಪಾಟ್ ಆಗಿದ್ದವು.
ಈ ಎರಡೂ ಕಡೆ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ನಡೆಸಿದ ಹೋರಾಟದ ಬಳಿಕ ಹೆದ್ದಾರಿ ಪ್ರಾಧಿಕಾರದವರು ಒಂದು ವರ್ಷದ ಹಿಂದೆ ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ತ್ವರಿತವಾಗಿ ನಡೆಯದ ಕಾಮಗಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಆಗುವುದನ್ನು ನೋಡಿ, ಏಕಾದರೂ ಮೇಲ್ಸೇತುವೆ ಬೇಕೆಂದು ಒತ್ತಾಯಿಸಿದ್ದೆವೋ ಎಂದು ಸ್ಥಳೀಯರು ತಮ್ಮನ್ನು ತಾವೇ ಶಪಿಸಿಕೊಳ್ಳುವಂತಾಗಿದೆ.
Kshetra Samachara
27/12/2024 02:03 pm