ಚಿತ್ರದುರ್ಗ: ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಅಚಾನಕ್ ಫಿಟ್ಸ್ ಬಂದ ಕಾರಣ ಸರಣಿ ಅಪಘಾತವೇ ಸಂಭವಿಸಿದೆ! ಆಕ್ಸಿಡೆಂಟ್ ನ ಸಿಸಿ ಟಿವಿ ವಿಡಿಯೋ ವೈರಲ್ ಆಗಿದ್ದು, ಈ ವೇಳೆ ಬಸ್ ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಪಾವಗಡ ಟು ಬೆಂಗಳೂರು ಸಂಚಾರ ಮಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಸಾವು- ಬದುಕಿನ ನಡುವೆ ರೈತ ನಾರಾಯಣ ಹೋರಾಟ ನಡೆಸ್ತಾ ಇದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ರೈತ ನಾರಾಯಣ ಚಿಕಿತ್ಸೆ ಪಡೆದುಕೊಳ್ತಾ ಇದ್ದು ತಲೆಗೆ ತೀವ್ರ ಗಾಯವಾಗಿದೆ.
ಒಂದು ಗೂಡ್ಸ್ ಆಟೋ ಮತ್ತು ಬೈಕ್ ಗೆ ಈ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಸೆಂಬರ್ 25ರ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿರುವ ಘಟನೆ ಅಂತ ತಿಳಿದು ಬಂದಿದೆ. ನೆಲಮಂಗಲ ಡಿಪೋ, ಚಿತ್ರದುರ್ಗ ವಿಭಾಗಕ್ಕೆ ಸೇರಿದ KA-57F4409 ಕೆಎಸ್ಆರ್ಟಿಸಿ ಬಸ್ ನಿಂದ ಆಗಿರುವ ಆಕ್ಸಿಡೆಂಟ್ ಅಂತ ಇದೀಗ ಮಾಹಿತಿ ಲಭ್ಯವಾಗಿದೆ.
PublicNext
29/12/2024 07:38 pm