ಚಿತ್ರದುರ್ಗ: ಚಿತ್ರದುರ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ 'ಸಂಜು ವೆಡ್ಸ್ ಗೀತಾ-2' ಚಲನಚಿತ್ರದ ಆಡಿಯೋವನ್ನು ನಾಯಕ ಶ್ರೀನಗರ ಕಿಟ್ಟಿ ಬಿಡುಗಡೆ ಮಾಡಿದ್ದಾರೆ.
ಬಳಿಕ ಮಾತನಾಡಿದ ನಾಯಕ ನಟ ಶ್ರೀನಗರ ಕಿಟ್ಟಿ, ಸಂಜು ವೆಡ್ಸ್ ಗೀತಾ ಸಿನಿಮಾವನ್ನು ಜನರು ಮೆಚ್ಚಿಕೊಂಡು ಅಪ್ಪಿಕೊಂಡಿದ್ದಾರೆ. ಅದೇ ರೀತಿ ಈ ಸಿನಿಮಾಗೂ ಕೂಡ ಎಲ್ಲರೂ ಒಪ್ಪಿಕೊಂಡು ಗೆಲ್ಲಿಸಿ ಕೊಡಬೇಕಾಗಿದೆ ಎಂದರು.
ರಾಜ್ಯದಲ್ಲಿ ತೆಲುಗು ಸಿನಿಮಾಗಳ ಹಾವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಟ ಶ್ರೀನಗರ ಕಿಟ್ಟಿ, ಸರ್ಕಾರ ಬಿಡುಗಡೆಗೆ ಸಂಬಂಧಿಸಿದಂತೆ ಕಠಿಣವಾದ ಕ್ರಮಗಳನ್ನು ವಿಧಿಸಬೇಕಾಗಿದೆ. ಇಂತಹ ವಿಚಾರಗಳನ್ನು ಮಾತನಾಡಬೇಕಾದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ನಮ್ಮ ಸಿನಿಮಾಗಳನ್ನ ನಾವು ಜನರಿಗೆ ತೋರಿಸಬೇಕಾದರೆ ದೊಡ್ಡ ಹೋರಾಟವೇ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎನ್ನುವುದು ವಿಚಾರವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕುಮಾರ್, ನಿರ್ಮಾಪಕರಾದ ಬಿ.ಕಾಂತರಾಜ್, ಭಾರ್ಗವಿ ದ್ರಾವಿಡ್ ಇದ್ದರು.
PublicNext
03/01/2025 12:28 pm