ಚಿತ್ರದುರ್ಗ: ಸಾಹಸ ಸಿಂಹ ಡಾ.ವಿಷ್ಣುವರ್ಧನ್‍ರವರ ಹದಿನೈದನೆ ವರ್ಷದ ಪುಣ್ಯಸ್ಮರಣೆಯನ್ನು ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದಿಂದ ಆಚರಿಸಲಾಯಿತು.
ತುರುವನೂರು ರಸ್ತೆಯಲ್ಲಿರುವ ಡಾ.ವಿಷ್ಣುವರ್ಧನ್‍ರವರ ಉದ್ಯಾನವನದಲ್ಲಿ ಡಾ.ವಿಷ್ಣುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿ.ಕೆ.ಗೌಸ್‍ಪೀರ್ ನಾಗರಹಾವು ಚಿತ್ರದ ಮೂಲಕ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ನಾಡಿನೆಲ್ಲೆಡೆ ಹರಡಿದ ಡಾ.ವಿಷ್ಣುವರ್ಧನ್‍ರವರ ಸ್ಮಾರಕಕ್ಕೆ ಜಾಗ ಕೊಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.
ನಾಡಿನಾದ್ಯಂತ ಡಾ.ವಿಷ್ಣುವರ್ಧನ್‍ರವರ ಸ್ಮಾರಕ ನಿರ್ಮಾಣವಾಗಬೇಕೆಂದು ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಯೋಚನೆಯಿದೆ. ಐವತ್ತೆರಡು ವರ್ಷಗಳ ಹಿಂದೆ ನಾಗರಹಾವು ಚಿತ್ರ ತೆರೆ ಕಂಡಿತು. ಅಭಿಮಾನಿಗಳನ್ನು ಅಗಲಿರುವ ನಟನಿಗೆ ಸರ್ಕಾರ ಅಗೌರವ ತೋರಿದರೆ ಸಹಿಸುವುದಿಲ್ಲವೆಂದು ಎಚ್ಚರಿಸಿದರು.
Kshetra Samachara
31/12/2024 05:55 pm