ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ಮತ್ತೋಡು ಗ್ರಾಮದ ಸಮೀಪದಲ್ಲಿರುವ ಮತ್ತೊಡು ರಾಂಮಕೊ ಸಿಮೆಂಟ್ ಫ್ಯಾಕ್ಟರಿಯಲ್ಲಿ ಸಿಮೆಂಟ್ ಲೋಡ್ ಮಾಡಲು ಬಂದಿದ್ದ (27) ವರ್ಷದ ತೀರ್ಥ ಪ್ರಸಾದ್ ಎಂಬಾತ ಸಿಮೆಂಟ್ ಲೋಡ್ ಆಗದ ಕಾರಣ ವಾಪಸ್ ಊರಿಗೆ ಹೋಗಲು ಫ್ಯಾಕ್ಟರಿಯ ಮುಂಭಾಗ ಇರುವ ಶಾಲೆಯ ಹತ್ತಿರದ ರಸ್ತೆಯ ಬದಿಯಲ್ಲಿ ಮೋಟರ್ ಬೈಕ್‌ನಲ್ಲಿ ನಿಂತಿದ್ದ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿದೆ.
ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಚಾಲಕ ಕುಮಾರ್ ರಾಥೋಡ್ ಡಿಕ್ಕಿಪಡಿಸಿದ ಪರಿಣಾಮ ಸ್ಥಳದಲ್ಲೇ ನುಜ್ಜುಗುಜ್ಜಾಗಿ ತೀರ್ಥ ಪ್ರಸಾದ್ ಎಂಬಾತ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
14/01/2025 10:34 pm