ಚಳ್ಳಕೆರೆ: ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿರುವ ಶ್ರೀ ಕೃಷ್ಣ ಭವನದ ಹೋಟೆಲ್ ಒಳಗಡೆ ಅಡುಗೆ ತಯಾರಿಸುವ ವೇಳೆ ಬೆಂಕಿ ಹತ್ತಿ ಧಗಧಗ ಉರಿದಿದೆ. ಸೂಕ್ತ ಸಮಯಕ್ಕೆ ಸ್ಥಳಕ್ಕೆ ಆಗಮಿದುದ ಆಗ್ನಿಶಾಮಕ ದಳ ಸಿಬ್ಬಂದಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾವುತ ತಪ್ಪಿಸಿದ್ದಾರೆ.
ಯಾವುದೇ ಪ್ರಾಣಾಪಾಯವಾಗದೆ ಭಾರಿ ಅನಾಹುತ ತಪ್ಪಿದೆ. ಹೋಟೆಲ್‌ನಲ್ಲಿ ಕಟ್ಟಿಗೆ ಒಲೆಯಾದರಿಂದ ಹೆಚ್ಚಿನ ಶೇಂಗಾ ಹೊಟ್ಟು ಹಾಕಿದ ಕಾರಣ ಹೊಗೆ ಪೈಪಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಪೈಪಿನಲ್ಲಿ ಹೆಚ್ಚಿನ ಎಣ್ಣಿ ಅಂಶ ಇದ್ದಿದ್ದರಿಂದ ಬೆಂಕಿ ಉರಿದಿದೆ. ಇದರಿಂದ ಆತಂಕಗೊಂಡ ಹೋಟೆಲ್‌ನವರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Kshetra Samachara
14/01/2025 08:23 am