ಚಳ್ಳಕೆರೆ : ರಾತ್ರೋ ರಾತ್ರಿ ಜಮೀನಲ್ಲಿದ್ದ ಅಡಿಕೆ ಗಿಡಗಳನ್ನ ಯಾರೋ ದುಷ್ಕರ್ಮಿಗಳು ಕಡಿದು ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿ ಹಳ್ಳಿಯಲ್ಲಿ ನಡೆದಿದೆ.
ಇನ್ನು ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನ ಕಡಿದು ಹಾಕಿದ್ದರಿಂದ ತೀರಾ ನಷ್ಟವಾಗಿದೆ. ಚನ್ನಮ್ಮನಾಗತಿ ಹಳ್ಳಿಯ ಶಿವಣ್ಣ ಮತ್ತು ಮುದ್ದಣ್ಣ ರೈತರಿಗೆ ಸೇರಿದ ಅಡಿಕೆ ಗಿಡಗಳು ಇವಾಗಿದ್ದು ಮಕ್ಕಳಂತೆ ಸಾಕಿತ ಗಿಡಗಳನ್ನು ಕೊಚ್ಚಿ ಹಾಕಿರೋದನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಸುಮಾರು 2 ಎಕರೆ ತೋಟದಲ್ಲಿನ ನೂರಾರು ಅಡಿಕೆ ಗಿಡಗಳನ್ನ ಕಡಿದು ಹಾಳ ಮಾಡಿದ ಸ್ಥಳಕ್ಕೆ ಪರುಶುರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
PublicNext
14/01/2025 12:43 pm