ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಖಾಸಗಿ ಬಸ್ ಮಾಲೀಕರಿಂದ ಫೋನ್ ಫೇ ಮೂಲಕ ಹಣ ಪಡೆದ ಸರ್ಕಾರಿ ಬಸ್ ಚಾಲಕರು

ಚಳ್ಳಕೆರೆ: ಸಾರಿಗೆ ಸಂಸ್ಥೆಗಳ ನಷ್ಟ ತಪ್ಪಿಸುವ ಉದ್ದೇಶದಿಂದ ಬಸ್ ದರ ಏರಿಕೆ ಮಾಡಿದರೆ ಇತ್ತ ಸಾರಿಗೆ ಬಸ್ ಚಾಲಕರೆ ಖಾಸಗಿ ಬಸ್ ಮಾಲೀಕರಿಂದ ಹಣ ಪಡೆದ 8 ಜನರು ಅಮಾನತು ಆಗಿರುವುದು ಬೆಳಕಿಗೆ ಬಂದಿದೆ.

ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್ ಘಟಕದಲ್ಲಿನ ಬಸ್ ಚಾಲಕರು ಖಾಸಗಿ ಬಸ್ ಮಾಲೀಕರೊಂದಿಗೆ ಸಹಕರಿಸಿ ಗ್ರಾಮೀಣ ಭಾಗಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಬಿಡುತ್ತಿಲ್ಲ. ಬದಲಿಗೆ ಫೊನ್ ಫೇ ಮೂಲಕ ಹಣ ಪಡೆದುಕೊಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ.

ಖಾಸಗಿ ಬಸ್ ಮಾಲೀಕ ಪ್ರವೀಣ್ ರಾಜ್ಯ ರಸ್ತೆ ಸಾರಿಗೆ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ದೂರು ನೀಡಿದ ಬೆನ್ನಲ್ಲೇ 8 ಜನ ಬಸ್ ಚಾಲಕರನ್ನು ಅಮಾನತು ಮಾಡಲಾಗಿದ್ದು, ತನಿಖೆ ಮಾಡಿದರೆ ಇನ್ನು ಹಲವು ಚಾಲಕರು ಖಾಸಗಿ ಬಸ್ ಮಾಲೀಕರಿಂದ ಹಣ ಪಡೆದಿರುವುದು ಬಯಲಾಗಲಿದೆ.

ರಾಜ್ಯ ರಸ್ತೆ ಸಾರಿಗೆ ಬಸ್‌ ಚಾಲಕ ಮಂಜುನಾಥ, ಜಗದೀಶ.ಆರ್, ರವಿಕುಮಾರ್.ಎಸ್‌, ಪ್ರಕಾಶ ಈ, ಸಿದ್ದಲಿಂಗಯ್ಯ ಮಠಪತಿ, ಮಹಾಸ್ವಾಮಿ ಇವರು ಖಾಸಗಿ ಬಸ್ ಮಾಲೀಕರ ಮತ್ತು ನಿರ್ವಾಹಕರಿಂದ ದಿನವೊಂದಕ್ಕೆ 200 ರೂಪಾಯಿಯನ್ನು ಫೋನ್‌ ಪೇ ಮುಖಾಂತರ ಮತ್ತು ನಗದಾಗಿ ಪಡೆಯುತ್ತಿದ್ದರು. ಇದರಿಂದಾಗಿ ಚಿತ್ರದುರ್ಗ-ಪಾವಗಡ-ಚಿತ್ರದುರ್ಗ, ಚಿತ್ರದುರ್ಗ-ಮಲ್ಲಸಮುದ್ರ ಮಾರ್ಗಗಳಲ್ಲಿ ನಿಗಮದ ವಾಹನಗಳನ್ನು ಸರಿಯಾಗಿ ಕಾರ್ಯಾಚರಣೆ ಮಾಡದೇ ಸಂಸ್ಥೆಗೆ ಮತ್ತು ಸಾರಿಗೆ ಆದಾಯ ನಷ್ಟವಾಗಲು ಕಾರಣರಾಗಿರುತ್ತಾರೆ.

Edited By : Vijay Kumar
PublicNext

PublicNext

12/01/2025 07:17 pm

Cinque Terre

23.19 K

Cinque Terre

1

ಸಂಬಂಧಿತ ಸುದ್ದಿ