ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋನಸಾಗರ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ: ಆಕರ್ಷಣೆಯ ಕೇಂದ್ರಬಿಂದುವಾದ ಡಾ. ಪುನೀತ್ ರಾಜ್ ಕುಮಾರ್ ರಂಗೋಲಿ ಚಿತ್ರ

ಮೊಳಕಾಲ್ಮುರು:- ಕೋನಸಾಗರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತವಾಗಿ 11ನೇ ವರ್ಷದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರು ಬೆಳಿಗ್ಗೆಯಿಂದಲೂ ತಮ್ಮ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ, ವಿವಿಧ ಚಿತ್ತಾಕರ್ಷಕ ತರಹೇವಾರಿ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಗಮನ ಸೆಳೆದರು, ಪ್ರಮುಖವಾಗಿ ದುರ್ಗಾಂಬಿಕಾ, ಮಮತಾ ಮತ್ತು ಜ್ಯೋತಿಯವರಿಂದ ಮೂಡಿ ಬಂದ ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ ರಂಗೋಲಿ ಚಿತ್ರವು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.ಪುನೀತ್ ರಾಜಕುಮಾರ್ ಹೆಗಲ ಮೇಲೆ ಪಾರಿವಾಳವಿರುವ ಈ ರಂಗೋಲಿಯ ಚಿತ್ರವು ಆಕರ್ಷಕವಾಗಿ ಮೂಡಿ ಬಂದಿತ್ತು.

ಸ್ಪರ್ಧೆಯಲ್ಲಿ ಪರಿಸರ ಉಳಿಸುವ ಮತ್ತು ಜಾಗೃತಿ ಮೂಡಿಸುವ ರಂಗೋಲಿ ಮತ್ತು ದೇಶ ಭಕ್ತಿ ಸಾರುವ ರಂಗೋಲಿಗಳು,ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸುವ ರಂಗೋಲಿ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ನಂಟು ಬೆಸೆಯುವ ವಿವಿಧ ರೀತಿಯ ರಂಗೋಲಿ ಚಿತ್ರಗಳು ಗಮನ ಸೆಳೆದವು.

Edited By : PublicNext Desk
Kshetra Samachara

Kshetra Samachara

14/01/2025 06:40 pm

Cinque Terre

2.4 K

Cinque Terre

0

ಸಂಬಂಧಿತ ಸುದ್ದಿ