ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂಚಿಟಿಗ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ.

ಹೊಸದುರ್ಗ : ಪಟ್ಟಣದ ಹೊರವಲಯದಲ್ಲಿ ಇರುವ ಕುಂಚಿಟಿಗ ಮಹಾಸಂಸ್ಥಾನ ಮಠ ಹಾಗೂ ಸಮೀಪದ ಸದ್ಗುರು ಆಶ್ರಮದ ಹತ್ತಿರ ಕಳೆದ ಒಂದು ವಾರದಿಂದ ಬೆಳಗ್ಗೆ ಸಂಜೆ ಬಿಟ್ಟು ಬಿಡದೇ ದೊಡ್ಡ ಚಿರತೆಯೊಂದು ಸುತ್ತಾಡುತ್ತಿದೆ, ನಿತ್ಯ ನೂರಾರು ಜನ ವಾಯು ವಿಹಾರಕ್ಕಾಗಿ ಸ್ಥಳೀಯರು ವಾಕಿಂಗ್,ಜಾಗಿಂಗ್, ಮಾಡುತ್ತಿರುತ್ತಾರೆ ಅಲ್ಲದೆ ಶ್ರೀಮಠಕ್ಕೆ ಭಕ್ತರು ಆಗಮಿಸುತ್ತಿರುತ್ತಾರೆ ಹಾಗಾಗಿ ತಕ್ಷಣ ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಅಳವಡಿಸಬೇಕೆಂದು ಶ್ರೀಮಠದ ಶಾಂತವೀರ ಸ್ವಾಮೀಜಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ಸುನಿಲ್ ಕುಮಾರ್ ಪ್ರತಿಕ್ರೀಯಿಸಿದ್ದು ಎರಡು ಮೂರು ದಿನಗಳ ಹಿಂದಷ್ಟೇ ಕರಡಿಯನ್ನು ಸೆರೆಹಿಡಿಯಲಾಗಿದೆ.ಶ್ರೀಮಠದ ಹತ್ತಿರ ಚಿರತೆಯ ಸಂಚಾರದ ಬಗ್ಗೆ ನಿಘವಹಿಸಿ ಹೆಜ್ಜೆ ಗುರುತುಗಳ ಆಧಾರದ ಮೇಲೆ ಬೋನ್ ಅಳವಡಿಸುವ ಕಾರ್ಯ ನೆಡೆಯುತ್ತಿದೆ.ಈಗಾಗಲೇ ಬೋನ ಅಳವಡಿಸಿರುವ ಸ್ಥಳವನ್ನು ಬಿಟ್ಟು ಮತ್ತೊಂದು ಸ್ಥಳದಲ್ಲಿ ಇಂದು ಮುಂಜಾನೆ ಎಂಟು ಗಂಟೆಯ ಹೊತ್ತಿಗೆ ಕಾಣಿಸಿಕೊಂಡಿದೆ.ಮುಂದಿನ ಎರಡು ದಿನಗಳಲ್ಲಿ ಸ್ಥಳ ಬದಲಾಯಿಸಿ ಬೋನನ್ನ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

14/01/2025 04:31 pm

Cinque Terre

900

Cinque Terre

0

ಸಂಬಂಧಿತ ಸುದ್ದಿ