ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕೆರೆಗೆ ಟಿಪ್ಪರ್‌ ಲಾರಿ ಪಲ್ಟಿ!- ಚಾಲಕ ಪ್ರಾಣಾಪಾಯದಿಂದ ಪಾರು

ಚಿತ್ರದುರ್ಗ: ಚಿತ್ರದುರ್ಗ ನಗರದ ಪಿಳ್ಳೆಕೆರೆಹಳ್ಳಿ ಕೆರೆಗೆ ಆಕಸ್ಮಿಕವಾಗಿ ಟಿಪ್ಪರ್‌ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಚಾಲಕ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಚಿತ್ರದುರ್ಗ ನಗರದ ಪಿಳ್ಳೆಕೆರೆಹಳ್ಳಿ ಕೆರೆಯ ಏರಿ ಮೇಲೆ ರಸ್ತೆ ಅಗಲೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಲಾರಿ ಕೆರೆಗೆ ಪಲ್ಟಿಯಾಗಿದೆ.

ಕೆರೆ ಏರಿ ದುರಸ್ತಿ ನಡೆಸುವ ಸಂದರ್ಭದಲ್ಲಿ ಟಿಪ್ಪರ್ ಲಾರಿಯ ಚಾಲಕ ಮಣ್ಣನ್ನು ತುಂಬಿಕೊಂಡು ಕೆರೆ ಏರಿ ಮೇಲೆ ಚಾಲನೆ ಮಾಡಿಕೊಂಡು ಬಂದಿದ್ದಾನೆ. ರಸ್ತೆಗೆ ಹಾಕಿದ ಮಣ್ಣು, ಕೆರೆಗೆ ಕುಸಿದ ಕಾರಣದಿಂದಾಗಿ ಏಕಾಏಕಿ ಏರಿಯ ಮಣ್ಣು ಕೆರೆಗೆ ಕುಸಿದಿದೆ. ಇದರಿಂದ ಲಾರಿ ಕೆರೆಗೆ ಪಲ್ಟಿಯಾಗಿದೆ. ಚಾಲಕ ಮುಂಜಾಗ್ರತಾ ಕ್ರಮದಿಂದ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಕೆರೆಯ ಸಮೀಪದಲ್ಲಿನ ಮಲ್ಲಾಪುರ ಹಾಗೂ ಪಿಳ್ಳಕೆರೆಹಳ್ಳಿ ಗ್ರಾಮಸ್ಥರು ಲಾರಿಯ ಚಾಲಕನನ್ನು ಉಪಚರಿಸಿದ್ದಾರೆ.

Edited By : Somashekar
PublicNext

PublicNext

13/01/2025 04:27 pm

Cinque Terre

16.13 K

Cinque Terre

0