ಹೊಸದುರ್ಗ: ತಾಲೂಕಿನ ವಾಣಿ ವಿಲಾಸ ಸಾಗರ ಸಂಪೂರ್ಣ ಭರ್ತಿದ ಹಿನ್ನೆಲೆಯಲ್ಲಿ ವಿ ವಿ ಸಾಗರ ಹಿನ್ನೀರ ಪ್ರದೇಶದ ಕೆಲ ರಸ್ತೆಗಳು ಜಲಾವೃತವಾಗಿ ಹಲವು ಹಳ್ಳಿಗಳ ಸಂಪರ್ಕಿಸುವ ರಸ್ತೆ ಜಲಾವೃತವಾಗಿವೆ.
ಅಡಿಕೆ,ತೆಂಗು ತೋಟಕ್ಕೆ ನುಗ್ಗಿದ ನೀರು ಇದರಿಂದ ಆತಂಕಕ್ಕೆ ಒಳಗಾಗಿರುವ ರೈತರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅತ್ತಿಮಗ್ಗೆ, ಅಂಚೆಬಾರಿಹಟ್ಟಿ ಲಕ್ಕಿಹಳ್ಳಿ, ಪೂಜಾರಹಟ್ಟಿ, ಬೇವಿನಹಳ್ಳಿ, ನಾಗೇನಹಟ್ಟಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆ ಜಲಾವೃತಗಿದ್ದು ರಸ್ತೆ ಮೇಲೆ ನೀರು ಹರಿಯುತ್ತುದ್ದರೂ ಅಪಾಯವನ್ನ ಲೆಕ್ಕಿಸದೇ ಬೈಕ್ ಸವಾರರ ಓಡಾಟ ನಡೆಸುತ್ತಿದ್ದಾರೆ.
Kshetra Samachara
14/01/2025 02:24 pm