ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಸುದ್ದಿ ಪ್ರಸಾರವಾದ ಒಂದೇ ದಿನದಲ್ಲೇ ಎಚ್ಚುತ್ತುಕೊಂಡ ನಗರಸಭೆ ಅಧಿಕಾರಿಗಳು.

ಚಳ್ಳಕೆರೆ: ನಗರದ ಲ್ಯಾಂಡ್ ಆರ್ಮಿ ಹಿಂಭಾಗ ಹಾಗೂ ಬಾಲಕಿಯ ಹಾಸ್ಟೆಲ್ ಮುಂಭಾಗದ ಲ್ಲಿ ಇರುವ ಕೊಳವೆ ಬಾವಿಗೆ ಮಲಮೂತ್ರದ ನೀರು ಸೇರುತ್ತಿದೆ ಎನ್ನು ಶೀರ್ಷಿಕೆ ಅಡಿಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ ವರದಿ ಮಾಡಲಾಗಿತ್ತು. ವರದಿ ಪ್ರಸಾರವಾದ ಒಂದೇ ದಿನದಲ್ಲಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೊಳವೆಬಾವಿ ಸುತ್ತ ಇರುವಂತಹ ಗಿಡಗಂಟೆಗಳನ್ನ ತೆರವು ಮಾಡಿದ್ದು , ನೆಲಕ್ಕೆ ಸಮಾನಾಂತರದಲ್ಲಿದ್ದ ಕೇಸಿಂಗ್ ಪೈಪ್ ನ್ನ ತೆಗೆದು ಮೂರು ಅಡಿ ಎತ್ತರ ಮಾಡಿ ಕೊಳವೆ ಬಾವಿಗೆ ಹರಿಯುತ್ತಿದ್ದ ಕೊಳಚೆ ನೀರನ್ನು ತಪ್ಪಿಸಿದ್ದಾರೆ. ಇದರಿಂದ ಇಲ್ಲಿನ ಸುತ್ತಮುತ್ತ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಅಧಿಕಾರಿಗಳ ಕಣ್ಣು ತೆರೆಸಿದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಪಾಪಣ್ಣ ಮದಕರಿ ಓಬಳೇಶ್ ದಾದಾಪೀರ್ ಅಭಿನಂದನೆ ಸಲ್ಲಿಸಿದ್ದಾರೆ.

Edited By : Vinayak Patil
PublicNext

PublicNext

13/01/2025 12:29 pm

Cinque Terre

16.28 K

Cinque Terre

0

ಸಂಬಂಧಿತ ಸುದ್ದಿ