ಚಳ್ಳಕೆರೆ: ತಾಲೂಕು ಸೋಮ ಗುದ್ದುಗ್ರಾಮದಲ್ಲಿ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೋಮ ಗುದ್ದು ಗ್ರಾಮದ ಮಹಿಳೆಯರು ಇಂದು ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಇರುವಂತಹ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಇದರಿಂದ ಇಲ್ಲಿನ ಮಕ್ಕಳು ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳು ಸಹ ಮಧ್ಯ ವಿಸನಿಗಳಾಗುತ್ತಿದ್ದು. ಮದ್ಯ ಕುಡಿದು ಬಂದಂತಹ ಮಧ್ಯಪ್ರಿಯರು ಗ್ರಾಮಗಳಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಆದರಿಂದ ಅಕ್ರಮ ಮಧ್ಯ ಮಾರಾಟದ ಅಂಗಡಿಗಳ ವಿರುದ್ಧ ಕ್ರಮ ಕೈಕೊಂಡು ಜನಸಾಮಾನ್ಯರ ದೃಷ್ಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲಿನ ನಂಬಿಕೆಯನ್ನು ಇಮ್ಮಡಿ ಗೂಳಿಸುವಂತಹ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
Kshetra Samachara
13/01/2025 02:53 pm