ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ನಕ್ಸಲರಿಗೆ ಸರೆಂಡರ್ ಆಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಹೊರ ವಲಯದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಕ್ಸಲರಿಗೆ ಸರೆಂಡರ್ ಆಗಿದೆ. 25 ವರ್ಷಗಳಿಂದ ಸಿಗದೆ ಇದ್ದವರು ಈಗ ಹೇಗೆ ಸಿಕ್ಕಿರು? ಎಂಬುದು ಪ್ರಶ್ನೆಯಾಗಿದೆ. ಇದೊಂದು ಪಿತೂರಿ ಆಗಿದ್ದು ನಕ್ಸಲರು ಸರ್ಕಾರಕ್ಕೆ ಸರೆಂಡರ್ ಆಗಿಲ್ಲ, ಸರ್ಕಾರವೇ ನಕ್ಸಲರಿಗೆ ಸರೆಂಡರ್ ಆಗಿದೆ. ಶಸ್ತ್ರಾಸ್ತ್ರಗಳನ್ನ ಬಿಟ್ಟು ಬಂದಿದ್ದು ಇನ್ಯಾರಿಗೋ ಕೊಟ್ಟು ಬಂದಿದ್ದಾರೋ ಇವರ ಹಿಂದೆ ಯಾರು ಇದ್ದಾರೆ ಎಂಬುದು ನೋಡಬೇಕಿದೆ. ಸರ್ಕಾರ ಭ್ರಷ್ಟರ ರಕ್ಷಣೆ ಮಾಡುತ್ತಿದ್ದು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕೆಲಸಗಳು ಆಗದೇ ಕುಂಠಿತವಾಗಿದೆ. ಬ್ರಿಟಿಷರ ಒಡೆದು ಆಳುವ ನೀತಿ ಕಾಂಗ್ರೆಸ್ ನಲ್ಲಿ ಬೇರೂರಿದೆ ಎಂದರು.
PublicNext
13/01/2025 07:14 am