ಹೊಸದುರ್ಗ: ಹೊಸದುರ್ಗ ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಸಚಿವ ಡಿ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಜನರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಈಗಾಗಲೇ ಭರ್ತಿಯಾಗಿದ್ದು ಕೋಡಿ ಬಿದ್ದು ಹರಿಯುತ್ತಿದೆ. ಕಳೆದ 118 ವರ್ಷಗಳಲ್ಲಿ ಇದು ಮೂರನೇ ಬಾರಿಗೆ ಕೋಡಿ ಬಿದ್ದು ಹರಿಯುತ್ತಿದ್ದು ಜನವರಿ 18 ಕ್ಕೆ, ಸಿಎಂ ಸಿದ್ದರಾಮಯ್ಯ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ.
ಈ ಹಿನ್ನೆಲೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಭೇಟಿ ನೀಡಿದ ಸಚಿವ ಡಿ ಸುಧಾಕರ್ ಅವರು ಪರಿಶೀಲನೆ ನಡೆಸಿದ್ದು ಜಲಾಶಯ ಮೂರನೇ ಬಾರಿಗೆ ಭರ್ತಿಯಾಗಿದ್ದು ಕೋಡಿ ಬಿದ್ದು ಹರಿಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಲಿದ್ದು ಇಲಾಖೆ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬಳಿಕ ಕೋಡಿ ಸ್ಥಳಕ್ಕೂ ಭೇಟಿ ನೀಡಿ ಕೋಡಿ ಬಿದ್ದು ಹೋಗುತ್ತಿದ್ದನ್ನ ವೀಕ್ಷಣೆ ಮಾಡಿದ್ದು ಒಂದೆರಡು ದಿನಗಳಲ್ಲಿ ನೀರು ರಭಸವಾಗಿ ಹರಿದು ಹೋಗಲಿದ್ದು ನೆರೆ ಪರಿಸ್ಥಿತಿ ಉಂಟಾಗುವ ಪರಿಸ್ಥಿತಿ ಬರಲಿದ್ದು ಕೆರೆ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಜಾಗ್ರತೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ತಿಳಿಸಿದರು.
Kshetra Samachara
13/01/2025 09:18 am