ಹೊಸದುರ್ಗ: ತಾಲೂಕಿನ ಮಧುರೆ ಗ್ರಾಮದ ಭಗೀರಥ ಗುರು ಪೀಠದ ಡಾ.ಪುರುಷೋತ್ತಮನಂದ ಪುರಿ ಶ್ರೀ ಗಳು 'ಸಿದ್ಧರೂಢರ ಚರಿತಾಮೃತ ಗ್ರಂಥದ ಶತಮಾನೋತ್ಸವದ 56 ದಿನಗಳ ಜ್ಯೋತಿ ರಥಯಾತ್ರೆಯನ್ನು' ಸ್ವಾಗತಿಸಿ ಮಾತನಾಡಿದರು.
ಶ್ರೀ ಮಠಕ್ಕೆ ಆಗಮಿಸುವ ಭಕ್ತರಿಗೆ ಜಾತ್ಯಾತೀತವಾಗಿ ಆಧ್ಯಾತ್ಮಿಕ ಚಿಂತನೆ ಜೊತೆಗೆ ಸಂಸ್ಕಾರ ನೀಡುವ ಕಾರ್ಯವನ್ನು ಸಿದ್ಧಾರೂಢ ಸ್ವಾಮೀಜಿ ಮಾಡಿದ್ದರು ಎಂದು ಸ್ಮರಿಸಿದರು.
ಸಿದ್ಧಾರೂಢ ಸ್ವಾಮೀಜಿ ಅವರ 190 ನೇ ಜಯಂತಿ, ಗುರುಗ್ರಂಥ ಸ್ವಾಮೀಜಿ ಅವರ 115 ನೇ ಜಯಂತಿ ಹಾಗೂ ಚರಿತಾಮೃತ ಗ್ರಂಥದ ಶತಮಾನೋತ್ಸವ ಕಾರ್ಯಕ್ರಮ ಫೆಬ್ರವರಿ 19 ರಿಂದ ನಡೆಯಲಿದೆ. ದೇಶಾದ್ಯಂತ 500 ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸುವರು. ಇಂದು ನಮ್ಮ ಶ್ರೀ ಮಠಕ್ಕೆ ಸಂತಸ ಆಗಮಿಸಿರುವುದು ಸಂತಸ ತಂದಿದೆ ಎಂದರು.
ಜ್ಯೋತಿ ಯಾತ್ರೆಗೆ ಶ್ರೀಮಠದಲ್ಲಿ ಬಾಗೂರು ಹಾಗೂ ಶ್ರೀರಂಗಪುರ ಗ್ರಾಮಸ್ಥರಿಂದ ಭಜನೆ, ಜಾನಪದ ಕಲಾ ತಂಡಗಳ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಸಿದ್ದಾರೂಡಸ್ವಾಮಿ ಟ್ರಸ್ಟ್ ಸಮಿತಿಯ ಸದಸ್ಯರು ಹಾಗೂ 35 ಜನ ಜ್ಯೋತಿ ಯಾತ್ರೆಯ ಸದಸ್ಯರನ್ನು ಅಭಿನಂದಿಸಲಾಯಿತು. ಜ್ಯೋತಿ ಯಾತ್ರೆಗೆ ವಿಶೇಷ ಪೂಜೆ ಸಲ್ಲಿಸಿ, ಮಳೆ, ಬೆಳೆ ಸಮೃದ್ಧಿಗೆ ಪ್ರಾರ್ಥಿಸಲಾಯಿತು.
Kshetra Samachara
14/01/2025 01:40 pm