This is a modal window.
Beginning of dialog window. Escape will cancel and close the window.
End of dialog window.
ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ನಶಿಸಿ ಹೋಗುವ ಹಂತಕ್ಕೆ ಬಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಚಿತ್ರದುರ್ಗ ನಗರದ ಮಾದರ ಚೆನ್ನಯ್ಯ ಗುರು ಪೀಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಬೆಲೆಯೂ ಇಲ್ಲ ಅನ್ನುವಂತಹ ಪ್ರಸ್ತುತ ನಿರ್ಮಾಣಗೊಂಡಿದೆ. ಭಿಕ್ಷುಕರಿಗೆ ಚಿಲ್ಲರೆ ಹಾಕಿದವರೇ ಹೆಚ್ಚಾಗಿ ನೆನಪಾಗ್ತಾರೆ. ನೋಟ್ ಗಳನ್ನು ಹಾಕಿದವರು ನೆನಪಾಗುವುದಿಲ್ಲ. ಚಿಲ್ಲರೆ ಕೊಟ್ಟು ನೋಟುಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಲೀಡರ್ ಗಳಿಗೆ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಸ್ಥಾನಗಳನ್ನು ನೀಡಿ ಮುಖಂಡರನ್ನು ಸಮಾಧಾನಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.
PublicNext
12/01/2025 11:15 pm