ಹೊಸದುರ್ಗ : ತಾಲೂಕಿನ ಶ್ರೀರಾಂಪುರ ಹೋಬಳಿಯ ಮಲ್ಲಿಹಳ್ಳಿ ಗ್ರಾಮದ ಕೃಷಿಕ ಪ್ರಭುಲಿಂಗಪ್ಪ ಹಾಗೂ ಮಹೇಶ್ ಅವರ ಸಿರಿಧಾನ್ಯ ರೈತರ ಒಕ್ಕಲು ಕಣ ಹಾಗೂ ರೈತರೊಂದಿಗಿನ ಸಮೂಹದ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಆಹಾರ ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷರಾದ ಬಿ. ಜಿ.ಗೋವಿಂದಪ್ಪ ಹೇಳಿದರು.
ಈ ಮೊದಲು ನವಣೆ ಅಕ್ಕಿ ಅನ್ನ ಉಣ್ಣುತ್ತಾರೆ ಎಂದರೆ, ಗ್ರಾಮೀಣ ಭಾಗದಲ್ಲಿ ಬಡವರು ಎಂದು ಭಾವಿಸಿ ಹೆಣ್ಣು ನೀಡುತ್ತಿರಲಿಲ್ಲ. ಇಂದು ಕಾಲ ಬದಲಾಗಿದೆ. ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಫಲವಾಗಿ ಬಡವರಿಗೂ ಅಕ್ಕಿ ಸಿಗುತ್ತಿದೆ ಎಂದು ಶಾಸಕ ಬಿ.ಜಿ.ಗೊವಿಂದಪ್ಪ ರೈತರೊಂದಿಗಿನ ಸಂವಾದದ ವೇಳೆ ಹೇಳಿದರು.
ಪೌಷ್ಠಿಕ ಆಹಾರ ಎನಿಸಿದ ಸಿರಿಧಾನ್ಯಗಳು ನಮ್ಮ ಆಹಾರ ಪದ್ದತಿಯಿಂದ ದೂರವಾಗುತ್ತಿವೆ. ವೈದ್ಯಲೋಕ ಸಿರಿಧಾನ್ಯಗಳ ಮಹತ್ವನ್ನು ಸಾಬೀತು ಮಾಡಿದೆ. ಇದರಿಂದಾಗಿ ಶ್ರೀಮಂತರು ಸಹ ಸಿರಿಧಾನ್ಯಗಳ ಆಹಾರ ಸೇವಿಸುತ್ತಿದ್ದಾರೆ. ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ದೊರಕಿದರೆ ಹೆಚ್ಚು ರೈತರು ಸಿರಿಧಾನ್ಯ ಕೃಷಿ ಕಡೆಗೆ ಮುಖ ಮಾಡುವರು. ಹೊಸದುರ್ಗ ತಾಲ್ಲೂಕು ಮೊದಲಿನಿಂದಲೂ ಸಿರಿಧಾನ್ಯ ಕೃಷಿ ಹೆಸರಾಗಿದೆ. ಸದ್ಯ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
PublicNext
17/01/2025 04:58 pm