ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಜ.17 ರಂದು ಕೃಷಿ ಸಚಿವ ಹೊಸದುರ್ಗದ ಶ್ರೀರಾಪುರಕ್ಕೆ ಭೇಟಿ

ಚಿತ್ರದುರ್ಗ: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಇದೇ  ಜ.17ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಚಿವರು ಅಂದು ಬೆಳಿಗ್ಗೆ 10ಕ್ಕೆ ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಹೋಬಳಿ ಮಲ್ಲಿಹಳ್ಳಿ ಗ್ರಾಮಕ್ಕೆ ಆಗಮಿಸಿ,  ಮಲ್ಲಿಹಳ್ಳಿ ಗ್ರಾಮದ ಪ್ರಭುಲಿಂಗಪ್ಪ ಬಿನ್ ಎ.ಎನ್.ಗಂಗಾಧರಪ್ಪ ಸಿರಿಧಾನ್ಯ ರೈತರ ಒಕ್ಕಲು ಕಣ ಮತ್ತು ಕ್ಷೇತ್ರ ಭೇಟಿ ಮಾಡುವರು. ನಂತರ ಬೆಳಿಗ್ಗೆ 11.45ಕ್ಕೆ ಶ್ರೀರಾಂಪುರದ ದುರ್ಗದ ಸಿರಿಧಾನ್ಯ ರೈತ ಉತ್ಪಾದಕ ಕಂಪನಿ ಲಿಮಿಟೆಡ್‍ನ ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ಹಾಗೂ ರೈತರೊಂದಿಗೆ ಸಂವಾದ ನಡೆಸುವರು. ನಂತರ ಶ್ರೀರಾಂಪುರ ನಾಡಕಚೇರಿ ಆವರಣದಲ್ಲಿ ಸಿರಿಧಾನ್ಯ ರೈತರು, ವರ್ತಕರು ಹಾಗೂ ರೈತ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.15ಕ್ಕೆ ಹೊಸದುರ್ಗಕ್ಕೆ ಆಗಮಿಸುವರು. ಮಧ್ಯಾಹ್ನ 1.45ಕ್ಕೆ ಹೊಸದುರ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Edited By : PublicNext Desk
PublicNext

PublicNext

16/01/2025 02:30 pm

Cinque Terre

13.05 K

Cinque Terre

0

ಸಂಬಂಧಿತ ಸುದ್ದಿ