ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡತೇಕಲವಟ್ಟಿ, ಕಂಚಿಪುರ ಗ್ರಾ.ಪಂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.

ಹೊಸದುರ್ಗ : ತಾಲೂಕಿನ ದೊಡ್ಡತೆಕಲವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕ ಹಾಗೂ ಆಹಾರ ನಾಗರಿಕ ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ ಭೂಮಿ ಪೂಜೆ ಸಲ್ಲಿಸಿದ್ದಾರೆ.

ದೊಡ್ಡತೇಕಲವಟ್ಟಿ ಗ್ರಾ.ಪಂ ಯ ಸಿರಿಗೊಂಡನಹಳ್ಳಿ ಗ್ರಾಮದ ಕುಂಬಾರ ಶಶಿ ಅವರ ಮನೆಯಿಂದ ಸಿದ್ದಲಿಂಗಣ್ಣ ಹನುಮಕ್ಕರ ಮನೆವರೆಗೆ 15.ಲಕ್ಷ ರೂ ಗಳ ಸಿ.ಸಿ.ರಸ್ತೆ ಗೆ ಚಾಲನೆ.

ದೊಡ್ಡತೇಕಲವಟ್ಟಿ ಗ್ರಾ.ಪಂ ದೊಡ್ಡತೇಕಲವಳ್ಳಿ ಗ್ರಾಮದ ಕೆರೆಸಂತೆ ಮಹಾಲಕ್ಷ್ಮಿ ದೇವಿ ಪ್ರಾರ್ಥನಾ ಮಂದಿರವರೆಗೆ 10. ಲಕ್ಷ ರೂ ಕಾಮಗಾರಿಗೆ ಚಾಲನೆ.

ಬುಕ್ಕಸಾಗರ ಕಂಚಿಪುರ ಮುಖ್ಯರಸ್ತೆಯಿಂದ ಬುಕ್ಕಸಾಗರ ಎ.ಕೆ ಕಾಲೋನಿವರೆಗೆ 15.ಲಕ್ಷ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ.

ದೊಡ್ಡತೇಕಲವಟ್ಟಿ ಗ್ರಾ.ಪಂ ಕೆರೆಮುಂದಲಹಟ್ಟಿ ಲಂಬಾಣಿ | ತಾಂಡ್ಯ ಗ್ರಾಮದಿಂದ ತೋಟದ ಮನೆ ಭೂತಪ್ಪನ ದೇವಸ್ಥಾನದವರೆಗೆ 15.ಲಕ್ಷ ಸಿ.ಸಿ ರಸ್ತೆ.ಚಾಲನೆ. ಈ ವೇಳೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು,ಗ್ರಾಮ ಪಂಚಾಯತಿ ಅದ್ಯಕ್ಷರು, ಸದಸ್ಯರುಗಳು, ಮುಖಂಡರುಗಳು, ಕಾರ್ಯಕರ್ತರು, ಇಲಾಖಾ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/01/2025 04:11 pm

Cinque Terre

620

Cinque Terre

0

ಸಂಬಂಧಿತ ಸುದ್ದಿ