ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾ ಉಸ್ತುವರಿ ಸಚಿವರು ಎಲ್ಲರ ಸಮಸ್ಯೆ ಅರಿತು ಅವರ ಪರವಾಗಿ ಕರ್ತವ್ಯ ನಿರ್ವಹಿಸಬೇಕು

ಹೊಸದುರ್ಗ: 'ಜಿಲ್ಲಾ ಉಸ್ತುವಾರಿ ಸಚಿವರು ಇಡೀ ಜಿಲ್ಲೆಯ ಪರವಾಗಿ ಕೆಲಸ ಮಾಡಬೇಕು. ಅವರು ಹಿರಿಯೂರಿಗೆ ಮಾತ್ರ ಸಚಿವರೇ?' ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಖಾರವಾಗಿ ಪ್ರಶ್ನಿಸಿದರು.' ವಿವಿ ಸಾಗರದ ಹಿನ್ನೀರಿನ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆ ಅರಿಯಲು ಉಸ್ತುವಾರಿ ಸಚಿವರು ಈವರೆಗೂ ಬಂದಿಲ್ಲ‌.ಇಡೀ ಜಿಲ್ಲೆಗೆ ಕಾರ್ಯಕ್ರಮ ರೂಪಿಸಬೇಕು. ಅವರು ತಾಲ್ಲೂಕಿನ ರೈತರ ಸಂಕಷ್ಟ ಅರಿಯಲು ವಿಫಲರಾಗಿದ್ದಾರೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ವಿವಿ ಸಾಗರ ಡ್ಯಾಂ ನಿರ್ಮಾಣಕ್ಕಾಗಿ ಹೊಸದುರ್ಗ ತಾಲ್ಲೂಕಿನ ರೈತರು 25,000 ಎಕರೆ ಭೂಮಿ ನೀಡಿದ್ದಾರೆ. ಸಚಿವರು ಎಲ್ಲರ ಸಮಸ್ಯೆ ಅರಿತು ಅವರ ಪರವಾಗಿ ಕರ್ತವ್ಯ ನಿರ್ವಹಿಸಬೇಕು. ಕೇವಲ ಒಂದು ತಾಲ್ಲೂಕಿಗೆ ಸೀಮಿತವಾಗಿರಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ತಮ್ಮ ಸ್ಥಾನಕ್ಕೆ ತಕ್ಕನಾಗಿ ಇರಬೇಕು' ಎಂದು ಅಸಮಾಧಾನ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

15/01/2025 05:37 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ